ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಆಪ್ತರಕ್ಷಕ'ನಿಗಾಗಿ ಸಿಂಗಾರಗೊಳ್ಳುತ್ತಿರುವ ನರ್ತಕಿ (Aptharakshaka | Vishnuvardhan | Narthaki)
ಸುದ್ದಿ/ಗಾಸಿಪ್
Bookmark and Share Feedback Print
 
Aptharakshaka
PR
ಆಪ್ತರಕ್ಷಕ ಚಿತ್ರ ಸದ್ಯದಲ್ಲೆ ಬಿಡುಗಡೆಯಾಗಲಿದ್ದು, ಈ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವಾಗಿ ನಗರದ ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಶೇಷವೆಂದರೆ ವಿಷ್ಣು ಅಭಿನಯದ ಆಪ್ತರಕ್ಷಕನ ಆಗಮನಕ್ಕಾಗಿ ನರ್ತಕಿ ಚಿತ್ರಮಂದಿರವನ್ನು 35ರಿಂದ 50 ಲಕ್ಷ ರೂಪಾಯಿ ಖರ್ಚು ಮಾಡಿ ಅಲಂಕರಿಸಲಾಗುತ್ತಿದೆಯಂತೆ.

ನರ್ತಕಿ ಚಿತ್ರಮಂದಿರದ ಪರದೆ, ಆಸನ ಮತ್ತು ಡಿಟಿಎಸ್ ವ್ಯವಸ್ಥೆಯನ್ನು ನವೀಕರಿಸುವಲ್ಲಿ ಥಿಯೇಟರಿನ ಕಾರ್ಮಿಕವರ್ಗದವರು ತಲ್ಲೀನರಾಗಿದ್ದಾರಂತೆ. ಆಪ್ತರಕ್ಷಕದಂತಹ ವಿಶೇಷ ಚಿತ್ರಕ್ಕಾಗಿ ಇಷ್ಟೆಲ್ಲಾ ಮಾಡಲು ಚಿತ್ರಮಂದಿರದ ಮಾಲೀಕರು ಸ್ವತಃ ಮುಂದೆ ಬಂದಿದ್ದಾರಂತೆ.

ಆಪ್ತರಕ್ಷಕ ವಿಷ್ಣುವರ್ಧನ್ ಅಭಿನಯದ ಕಟ್ಟಕಡೆಯ ಚಿತ್ರವಾಗಿದ್ದು, ಇದೇ ಫೆ.12ರಂದು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ. ಈಗಾಗಲೇ ಆಪ್ತರಕ್ಷಕ ಧ್ವನಿ ಸುರುಳಿಗೆ ಉತ್ತಮ ಅಭಿಪ್ರಾಯ ಕೇಳಿ ಬಂದಿದ್ದು, ಸಹಜವಾಗಿಯೇ ನಿರೀಕ್ಷೆ ಮುಗಿಲು ಮುಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಪ್ತರಕ್ಷಕ, ವಿಷ್ಣುವರ್ಧನ್, ನರ್ತಕಿ, ಪಿವಾಸು