ಬಣ್ಣದ ಚಿತ್ರ ಈ ಒಲವಿನ ಬಣ್ಣ
ಬಣ್ಣಕ್ಕೂ ಸಿನಿಮಾ ಜಗತ್ತಿಗೂ ಅನಾದಿಕಾಲದಿಂದಲೂ ನಂಟಿದೆ. ಚಿತ್ರರಂಗದವರು ಎಂದ ಮೇಲೆ ಬಣ್ಣ ಹಚ್ಚಲೇಬೇಕು. ಇಂತಹ ಶಕ್ತಿ ಇರುವ ಬಣ್ಣಗಳ ಕುರಿತೇ ಕನ್ನಡದಲ್ಲಿ ಚಿತ್ರವೊಂದು ತಯಾರಾಗಿದೆ.ನನ್ನ ಒಲವಿನ ಬಣ್ಣ ಎಂಬ ಚಿತ್ರ ಸೆನ್ಸಾರ್ ಮಂಡಳಿಗೆ ಹೋಗಿ ಬಂದಿದೆ. ಅದಕ್ಕೆ ಈಗ ಯು/ಎ ಪ್ರಮಾಣಪತ್ರವೂ ಸೆನ್ಸಾರ್‌ನಿಂದ ಸಿಕ್ಕಿದೆಯಂತೆ. ಆದರೆ 'ಯು' ಏನೋ ಒಕೆ. 'ಎ' ಯಾಕೆ ಎಂಬುದು ಇನ್ನೂ ಗೊತ್ತಾಗಿಲ್ಲ.ಸೋಮಶೇಖರ್ ಈ ಚಿತ್ರದ ನಿರ್ಮಾಪಕರು ಹಾಗೂ ನಾಯಕ ನಟರು. ಚಿತ್ರಕಲಾವಿದನೊಬ್ಬನ ಆಸೆಗೆ ನಾಯಕಿ ಹೇಗೆ ಸಹಾಯ ಮಾಡುತ್ತಾಳೆ ಎಂಬುದನ್ನು ಈ ಚಿತ್ರದ ಮೂಲಕ ತೋರಿಸಲಾಗುವುದು ಎನ್ನುತ್ತಾರೆ ಚಿತ್ರದ ನಿರ್ದೇಶಕ ಭೂಷಣ್. ಈ ಚಿತ್ರದ ನಾಯಕಿಯಾಗಿ ಶಾಂತಲಾ ಎಂಬಾಕೆ ನಟಿಸುತ್ತಿದ್ದರೆ. ವಿ.ಮನೋಹರ್ ಸಂಗೀತ ಹಾಗೂ ನಾಗೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.