ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೆಟ್ಟೇರಲಿದೆ ಮಕ್ಕಳ 'ಡಂಗುರ' (Dangura | Kuku)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇತ್ತೀಚೆಗೆ ಕನ್ನಡದಲ್ಲಿ ಮಕ್ಕಳ ಚಿತ್ರಗಳ ಸಂಖ್ಯೆಯಲ್ಲಿ ಕೊಂಚ ಸುಧಾರಣೆ ಕಂಡುಬರುತ್ತಿದೆ. ಮೊನ್ನೆಯಷ್ಟೇ ಕುಕು ಎಂಬ ಚಿತ್ರ ಬಿಡುಗಡೆಯಾಗಿತ್ತು. ಇದೀಗ ಡಂಗುರ ಹೆಸರಿನ ಚಿತ್ರವೊಂದು ಸೆಟ್ಟೇರಿದೆ. ಈ ಚಿತ್ರದಲ್ಲಿ 7 ಮಕ್ಕಳು ನಟಿಸಲಿದ್ದು, ಮಂಜು ಮಸ್ಕಲ್ ಕಟ್ಟಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಶೋಕ್ ರಾಜ್ ಈ ಡಂಗುರದ ನಿರ್ಮಾಪಕರು.

ಇದು ಮಕ್ಕಳ ಚಿತ್ರವಾದರೂ ಒಂದು ಸಾಮಾಜಿಕ ಪ್ರಜ್ಞೆ ಇರುವ ಚಿತ್ರವಂತೆ. ಆಟವಾಡಿಕೊಂಡಿರುವ ಮಕ್ಕಳಿಗೆ ಜವಾಬ್ದಾರಿ ಬಂದಾಗ ಹೇಗಿರುತ್ತದೆ ಎಂಬುದನ್ನು ನಿರ್ದೇಶಕ ಮಂಜು ಈ ಚಿತ್ರದ ಮೂಲಕ ತೋರಿಸಲಿದ್ದಾರಂತೆ. ಚಿತ್ರದ ಕಥೆ ಹಿಡಿಸಿದ್ದರಿಂದ ದುಡ್ಡು ಹಾಕಲು ಮುಂದೆ ಬಂದಿದ್ದಾಗಿ ಹೇಳಿ ತಮ್ಮ ಮಾತು ಮುಗಿಸುತ್ತಾರೆ ನಿರ್ಮಾಪಕ ಮಂಜು.

ಶರತ್, ರಮೇಶ್ ಭಟ್, ರೇಖಾದಾಸ್, ಪವಿತ್ರಾ ಲೊಕೇಶ್ ಮುಖ್ಯ ತಾರಾಗಣದಲ್ಲಿದ್ದು, ಧನಪಾಲ್ ಸಂಗೀತ, ನಿರಂಜನ ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡಂಗುರ, ಕುಕು, ಮಕ್ಕಳ ಚಿತ್ರ