ಹೊರ ರಾಜ್ಯದ ನಟಿಯರು ಕನ್ನಡಕ್ಕೆ ಬರುವುದೇನೂ ಹೊಸ ಸಂಗತಿಯಲ್ಲ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಮತ್ತೋರ್ವ ದಕ್ಷಿಣದ ನಟಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ಮಲಯಾಳಂ, ತಮಿಳು, ತೆಲುಗು ಭಾಷೆಗಳ ಸುಮಾರು 45ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಭಾವನಾ ಮೆನನ್ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಅದೂ ಪುನೀತ್ ಅವರ ನಾಯಕತ್ವದ ಚಿತ್ರದಲ್ಲಿ.
ಡಾ.ರಾಜ್ ಅವರ ಹೋಂ ಬ್ಯಾನರಿನಡಿ ತಯಾರಾಗಲಿರುವ, ಸೂರಿ ನಿರ್ದೇಶನದ 'ಜಾಕಿ' ಚಿತ್ರದ ನಾಯಕಿಯಾಗಿ ಭಾವನಾ ಆಯ್ಕೆಯಾಗಿದ್ದಾರೆ. ಈಕೆಯ ಮೂಲ ಹೆಸರು ಕಾರ್ತಿಕಾ ಮೆನನ್ ಅಂತ. 2002ರಲ್ಲಿ ಮಲಯಾಳಂನ ನಮ್ಮಲ್ ಚಿತ್ರದಲ್ಲಿ ನಟಿಸುವ ಮೂಲಕ ಕಾರ್ತಿಕಾ, ಭಾವನಾ ಹೆಸರಿನಲ್ಲಿ ಜನಪ್ರಿಯರಾದರು.
ಈ ಕೇರಳದ ಸುಂದರಿ ಸಾಮಾನ್ಯಳೆಂದು ಭಾವಿಸಬೇಡಿ. ಹಲವು ಫಿಲಂ ಫೇರ್ ಪ್ರಶಸ್ತಿಗಳಲ್ಲದೆ 2006ರಲ್ಲಿ ಕೇರಳ ರಾಜ್ಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ತಮಿಳು, ತೆಲುಗು, ಮಲಯಾಳಂ ಈ ಮೂರೂ ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ಭಾವನಾ ನಟಿಸಿದ್ದಾರೆ.