ನಂದಿನಿ ಮೇಲಿನ ಮಮತೆಯಿಂದ ನಾಯಕ ಕೃಷ್ಣ ಕಾಲೇಜಿನಲ್ಲಿ ಗುಂಡಾ ಆಗಿರುವ ಉದಯ್ ಬೈಕ್ ಹಾಳು ಮಾಡುತ್ತಾನೆ. ಇದರಿಂದ ರೋಷಗೊಂಡ ಉದಯ್ ಜಗಳಕ್ಕೆ ನಿಲ್ಲುತ್ತಾನೆ. ಇವರಿಬ್ಬರಲ್ಲಿ ಮಾರಾಮಾರಿ ಹೊಡೆದಾಟವಾಗುತ್ತದೆ. ಇದನ್ನು ಗಂಡೆದೆ ಚಿತ್ರಕ್ಕಾಗಿ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಚಿತ್ರೀಕರಿಸಿದರು.
ಇದೊಂದು ಪಕ್ಕಾ ಲವ್ ಅಂಡ್ ಆಕ್ಷನ್ ಚಿತ್ರ. ನಿರ್ದೇಶಕ ಶಿವ ಅಕುಲಾ ಮೂಲತಃ ತೆಲುಗಿನವರು. ತೆಲುಗಿನಲ್ಲಿ ಈ ಚಿತ್ರವನ್ನು ಮಾಡಬೇಕೆಂದು ಅಂದಕೊಂಡಿದ್ದರಂತೆ. ಆದರೆ ಮೊದಲು ಇದನ್ನು ಕನ್ನಡದಲ್ಲೇ ಮಾಡೋಣ ಎಂದು ಕರೆ ತಂದಿದ್ದಾರೆ ನಿರ್ಮಾಪಕ ರಾಮು.
MOKSHA
ಇಂತಹದೊಂದು ಆಸೆ ನಾಯಕ ಚಿರಂಜೀವಿ ಸರ್ಜಾಗೂ ಇತ್ತಂತೆ. ರಾಮು ಬ್ಯಾನರ್‌ನಲ್ಲಿ ಚಿತ್ರ ಮಾಡಬೇಕೆನ್ನುವುದು ಅವರ ಬಹುದಿನದ ಕನಸು. ಇದರಲ್ಲಿ ತಾನು ಕಾಲೇಜು ಸ್ಟೂಡೆಂಟ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಆಕ್ಷನ್‌ಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಪಾತ್ರದ ಬಗ್ಗೆ ವಿವರಿಸುತ್ತಾರೆ ಚಿರಂಜೀವಿ ಸರ್ಜಾ. ಮೊದಲ ಚಿತ್ರ ವಾಯುಪುತ್ರ ನಿರೀಕ್ಷಿತ ಯಶಸ್ಸು ಗಳಿಸದಿರುವ ಬಗ್ಗೆ ಚಿರಂಜೀವಿ ಸರ್ಜಾಗೆ ನೋವಿದೆ. ಅಂದಹಾಗೆ, ಚಿತ್ರಕ್ಕೆ ರಾಗಿಣಿ ನಾಯಕಿಯಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ನನ್ನಿನ ಗಂಡೆದೆ ಮಿಂಚುತ್ತಾ ಕಾದು ನೋಡಬೇಕು.