ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸದ್ಯದಲ್ಲೇ ತೆರೆಗೆ ಪೂಜಾ- ರಾಧಿಕಾ ಗಾಂಧಿಯ 'ಹರಿಕಥೆ' (Shri Harikathe | Pooja Gandhi | Radhika Gandhi | Dayal)
ಸುದ್ದಿ/ಗಾಸಿಪ್
Bookmark and Share Feedback Print
 
Shri Harikathe
PR
ಹರಿಕಥೆಯನ್ನು ಸದ್ಯದಲ್ಲಿ ಪ್ರೇಕ್ಷಕರಿಗೆ ಹೇಳಲಿದ್ದಾರೆ ನಿರ್ದೇಶಕ ದಯಾಳ್. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಎ ಮತ್ತು ಯು ಸರ್ಟಿಫೀಕೇಟ್ ಪಡೆದುಕೊಂಡಿರುವ ಚಿತ್ರ, ಈ ತಿಂಗಳ 25ರಂದು ಬಿಡುಗಡೆಗೆ ಸಿದ್ದಗೊಳಿಸಿದೆ.

ಶ್ರೀಮುರಳಿ, ಪೂಜಾಗಾಂಧಿ, ರಾಧಿಕಾ ಗಾಂಧಿ ಅಭಿನಯದ ಈ ಚಿತ್ರ ಸಿಕ್ಕಾಪಟ್ಟೆ ರಂಜನೀಯವಾಗಿದೆ ಎನ್ನುತ್ತಿದೆ ಗಾಂಧಿನಗರ. ಅದರಲ್ಲೂ ಮುಖ್ಯವಾಗಿ ದಯಾಳ್ ಚಿತ್ರಕಥೆ ಮತ್ತು ನಿರ್ದೇಶನ ಪ್ರೇಕ್ಷಕರಿಗೆ ಸಖತ್ ಮನೋರಂಜನೆ ನೀಡಲಿದೆಯಂತೆ.

ಮೊದಲ ಬಾರಿಗೆ ಪೂಜಾಗಾಂಧಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರೂ ಇತ್ತೀಚೆಗೆ ಯಶಸ್ಸಿನ ನಿರೀಕ್ಷೆಯಲ್ಲಿರುವ ಪೂಜಾಗೆ ಈ ಚಿತ್ರ ಅಗ್ನಿ ಪರೀಕ್ಷೆಯೇ ಸರಿ. ಅತ್ತ ದಯಾಳ್ ಅವರಿಗೂ ಇದು ಪ್ರತಿಷ್ಠೆಯ ಚಿತ್ರವಾಗಿದೆ. ಒಟ್ಟರೆ ಪೂಜಾ- ರಾಧಿಕಾರ ಹರಿಕಥೆ ಕೇಳಲು ಎಲ್ಲರೂ ಚಿತ್ರಮಂದಿರಕ್ಕೇ ಹೋಗಬೇಕು!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹರಿಕಥೆ, ಪೂಜಾ ಗಾಂಧಿ, ರಾಧಿಕಾ ಗಾಂಧಿ, ದಯಾಳ್