ಹೆಚ್ಚು ಕಮ್ಮಿ ಕನ್ನಡದ ಎಲ್ಲಾ ನಾಯಕರನ್ನು ಹಾಕಿಕೊಂಡು ನಿರ್ದೇಶಿಸಿದ ಕೀರ್ತಿ ಎಸ್.ನಾರಾಯಣ್ ಅವರಿಗೆ ಸಲ್ಲುತ್ತದೆ. ಇದೀಗ ಅವರು ಕಿಚ್ಚ ಸುದೀಪ್ ಅವರ ನಾಯಕತ್ವದಲ್ಲಿ ಚಿತ್ರವೊಂದನ್ನು ನಿರ್ದೇಶಿಸಲು ಸಜ್ಜಾಗಿರುವುದು ಗೊತ್ತೇ ಇದೆ.
ಎಸ್. ನಾರಾಯಣ್ ಹಾಗೂ ಸುದೀಪ್ ಜೋಡಿಯೆಂದರೆ ಚಿತ್ರರಸಿಕರಲ್ಲಿ ಬಹಳ ನಿರೀಕ್ಷೆ ಮೂಡಿಸುವಲ್ಲಿ ಅನುಮಾನವಿಲ್ಲ. ವಿಭಿನ್ನ ರೀತಿಯ ನೈಜ ಸನ್ನಿವೇಶಗಳೊಂದಿಗೆ ಕಥೆಗೆ ತುಂಬಾ ಪ್ರಾಮುಖ್ಯತೆ ನೀಡಿದ್ದು, ಹಾಡು ಮತ್ತು ಹಾಸ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ನಾರಾಯಣ್ ತಿಳಿಸಿದ್ದಾರೆ.
ಈ ಚಿತ್ರಕ್ಕೆ ನಾಯಕಿಯ ಆಯ್ಕೆ ನಡೆಯುತ್ತಿದ್ದು, ನಾರಾಯಣ್ ಕನ್ನಡತಿಯೊಬ್ಬಳನ್ನು ಪರಿಚಯಿಸಲು ನಿರ್ಧರಿಸಿದ್ದಾರಂತೆ. ಏಪ್ರಿಲ್ ತಿಂಗಳಲ್ಲಿ ಈ ಚಿತ್ರ ಸೆಟ್ಟೇರಲಿದೆ.