ನಮ್ಮಲ್ಲಿ ಲವ್ ಸ್ಟೋರಿ ಒಂದಿದ್ದರೆ ಸಾಕು, ಚಿತ್ರ ಮುಗಿದುಬಿಡುತ್ತದೆ. ಇದೇ ಸಾಲಿನ ಚಿತ್ರಗಳ ಗುಂಪಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. 'ಪ್ರೀತಿ ನೀ ಶಾಶ್ವತಾನಾ' ಎಂಬುದು ಚಿತ್ರದ ಹೆಸರು.
ಚಿತ್ರಕಥೆ ಬರೆಯುವ ಮೊದಲು ಹತ್ತಾರು ಪ್ರೇಮಿಗಳನ್ನು ಸಂದರ್ಶಿಸಿ, ಸಮೀಕ್ಷೆ ನಡೆಸಲಾಗಿದೆಯಂತೆ. ಈ ಸಾಹಸದಲ್ಲಿ ಸ್ವತಃ ಚಿತ್ರದ ನಿರ್ಮಾಪಕರಾದ ವೆಂಕಟೇಶ್ ಪಾಲ್ಗೊಂಡಿದ್ದರಂತೆ!!!
ಪ್ರೇಮ ಕವಿ ಕೆ.ಕಲ್ಯಾಣ್ ಈ ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಗೀತ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕೀರ್ತಿ ಹಾಗೂ ಅಕ್ಷಯ್ ಕುಮಾರ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿದ್ದು, ಪ್ರೀತಿ ಶಾಶ್ವತಾನಾ.. ಅಲ್ಲವಾ... ಎಂಬುದನ್ನು ಪ್ರೇಕ್ಷಕ ಪ್ರಭುಗಳು ನಿರ್ಧರಿಸಲಿದ್ದಾರೆ.