ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪೇಂದ್ರಗೆ ಈಗ 'ಸೂಪರ್' ಚಿತ್ರದ ಬಗ್ಗೆ ಚಿಂತೆಯೋ ಚಿಂತೆ! (Super | Upendra | Nayantara)
ಸುದ್ದಿ/ಗಾಸಿಪ್
Bookmark and Share Feedback Print
 
PR
ಉಪೇಂದ್ರ ಅವರಿಗೆ ತನ್ನ ನಿರ್ದೇಶನದ ಮುಂಬರುವ ಚಿತ್ರ ಸೂಪರ್ ಬಗ್ಗೆಯೇ ಚಿಂತೆ. ಅದೇಕಪ್ಪಾ ಅಂತೀರಾ, ಸೂಪರ್ ಚಿತ್ರ ತಾನು ಕೆಲಸ ಆರಂಭಿಸುವ ಮೊದಲೇ ಸಿಕ್ಕಾಪಟ್ಟೆ ಸುದ್ದಿಗೆ ಗ್ರಾಸವಾಗಿರುವುದೇ ಉಪೇಂದ್ರ ಅವರ ಚಿಂತೆಗೆ ಕಾರಣವಂತೆ!

ಹೌದು. ಉಪೇಂದ್ರ 10 ವರ್ಷದ ನಂತರ ಮತ್ತೆ ನಿರ್ದೇಶನಕ್ಕೆ ಮರಳಿರುವುದು ಬಹುತೇಕರಿಗೆ ಸಂತೋಷ, ಆಶ್ಚರ್ಯ, ಕುತೂಹಲವನ್ನು ಸೃಷ್ಟಿಸಿದೆ. ಜೊತೆಗೆ ಸೂಪರ್ ಚಿತ್ರದ ಬಗ್ಗೆ ಯದ್ವಾತದ್ವಾ ನಿರೀಕ್ಷೆಯೂ ಹುಟ್ಟಿದೆ. ಈ ನಿರೀಕ್ಷೆಯೇ ಈಗ ಉಪೇಂದ್ರರನ್ನು ಚಿಂತೆಗೀಡುಮಾಡಿದೆ. ಜನರೀಗ ನನ್ನ ಸೂಪರ್ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಇದಕ್ಕಾಗಿ ನನಗೆ ಚಿಂತೆಯಾಗಿಬಿಟ್ಟಿದೆ ಎಂದು ಉಪೇಂದ್ರ ಹೇಳುತ್ತಾರೆ.

PR
ಸೂಪರ್ ಅರ್ಥ ಧ್ವನಿಸುವ ಚಿಹ್ನೆಯ ಚಿತ್ರವನ್ನು ಇದೀಗ ನಿರ್ದೇಶನಕ್ಕೆ ಕೈಗೆತ್ತಿಕೊಂಡಿರುವ ಉಪೇಂದ್ರ ಈ ಚಿತ್ರವನ್ನು ಬರೋಬ್ಬರಿ 100 ದಿನಗಳ ಕಾಲ ಶೂಟಿಂಗ್ ನಿರ್ಧರಿಸಿರುವ ಉಪೇಂದ್ರ ಚಿತ್ರದಲ್ಲಿ 20 ಹೊಸ ಮುಖಗಳ ಪರಿಚಯವನ್ನೂ ಮಾಡಿಕೊಡಲಿದ್ದಾರಂತೆ. ಈ ಹೊಸ ಮುಖಗಳಲ್ಲಿ ಕೆಲವರು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಹೊರಬರುವ ಇದೇ ಸೂಪರ್ ಚಿತ್ರದಲ್ಲೂ ನಟಿಸಲು ಅವಕಾಶವನ್ನು ಉಪೇಂದ್ರ ನೀಡಿದ್ದಾರಂತೆ.

ಈ ಚಿತ್ರಕ್ಕಾಗಿ ಸೂಪರ್ 35 ಕ್ಯಾಮರಾವನ್ನು ವಿಶೇಷವಾಗಿ ತರಿಸಿದ್ದಾರೆ ಉಪೇಂದ್ರ. ನಾಯಕಿಯಾಗಿ ಈಗಾಗಲೇ ತಮಿಳು ಹಾಗೂ ತೆಲುಗಿನ ಖ್ಯಾತ ನಟಿ ನಯನತಾರಾ ಆಯ್ಕೆಯಾಗಿರುವುದು ಗೊತ್ತಿರುವ ವಿಚಾರ. ಚಿತ್ರವನ್ನು ಡಿಫರೆಂಟ್ ಆಗಿ ತರಲು ಎಲ್ಲ ಪ್ರಯತ್ನವನ್ನೂ ನಾನು ಮಾಡುತ್ತಿದ್ದೇನೆ ಎನ್ನುವ ಉಪೇಂದ್ರ ಇನ್ನೂ, ಚಿತ್ರಕ್ಕಾಗಿ ಸಂಗೀತ ನಿರ್ದೇಶಕರನ್ನು ಗೊತ್ತು ಮಾಡಿಲ್ಲವಂತೆ. ಆದರೆ ಉಪೇಂದ್ರ ಅವರ ಖಾಯಂ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಈ ಚಿತ್ರದಿಂದ ಹೊರಬಿದ್ದಿದ್ದು, ಆ ಜಾಗಕ್ಕೆ ವಿ.ಮನೋಹರ್ ಸೇರ್ಪಡೆಯಾಗಿದ್ದಾರೆಂಬ ಸುದ್ದಿಯೂ ಗಾಂಧಿನಗರದ ಗಲ್ಲಿಯಲ್ಲಿದೆ. ಆದರೂ ಉಪೇಂದ್ರ ಈ ಬಗ್ಗೆ ಅಧಿಕೃತವಾಗಿ ಏನೂ ಹೇಳಿಲ್ಲ.

ಇಷ್ಟೆಲ್ಲಾ ಆದರೂ ಚಿತ್ರದ ಬಜೆಟ್ ಬಗ್ಗೆ ಉಪೇಂದ್ರ ಆಗಲೀ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಆಗಲೀ ತುಟಿಪಿಟಿಕ್ಕೆಂದಿಲ್ಲ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉಪೇಂದ್ರ, ಸೂಪರ್, ನಯನತಾರಾ, ರಾಕ್ಲೈನ್ ವೆಂಕಟೇಶ್