ಇತ್ತೀಚೆಗೆ ನಟಿ ಬಿಯಾಂಕ ತಮ್ಮ ಹುಟ್ಟಹಬ್ಬದ ಸಂಭ್ರಮವನ್ನು ಬೆಂಗಳೂರು ಮತ್ತು ಮುಂಬೈನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು. ಹುಟ್ಟುಹಬ್ಬಕ್ಕೆ ಬಿಯಾಂಕ ತಮ್ಮ ಅಮ್ಮನಿಂದ ದುಬಾರಿ ಮೊತ್ತದ ಉಡುಗೊರೆ ಪಡೆದಿದ್ದಾರಂತೆ.
ಜನ್ಮದಿನದ ಸಂಭ್ರಮದಂದು ಬಿಯಾಂಕ ಬೆಂಗಳೂರು ಮತ್ತು ಮುಂಬೈ ಎರಡೂ ಕಡೆ ಸ್ನೇಹಿತರೊಂದಿಗೆ ಕಾಲ ಕಳೆದಿದ್ದಾರೆ. ಮದ್ಯಾಹ್ನದವರೆಗೆ ನಗರದಲ್ಲಿದ್ದು, ಅನಂತರ ಬಿಯಾಂಕ ಮುಂಬೈಗೆ ಹಾರಿದ್ದರು. ಆದರೆ, ಬಿಯಾಂಕಾಗೆ ವರ್ಷ ಎಷ್ಟು ಎಂದು ಮಾತ್ರ ಕೇಳಬೇಡಿ. ಅದು ಗುಟ್ಟಿನ ವಿಚಾರವಂತೆ!
ಗುಲಾಮ ಮತ್ತು ರಾಕಿ ಚಿತ್ರದಿಂದ ಬಿಯಾಂಕ ಸಾಕಷ್ಟು ತಿಳಿದುಕೊಂಡಿದ್ದಾರಂತೆ. ಯಾರೊಬ್ಬರೂ ಮೊದಮೊದಲೇ ಪರಿಪೂರ್ಣರಾಗಿರುವುದಿಲ್ಲ ಎಂಬುದು ಬಿಯಾಂಕಳ ವಾದ.