ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪುಟಾಣಿ 'ಅಗಸ್ತ್ಯ'ನ ಆಗಮನ, ಅಪ್ಪನಾದ ಶ್ರೀಮುರಳಿ! (Murali | Agasthya | Vijay Raghavendra | Shriharikathe)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟ ಮುರಳಿ ಅವರ ಗಂಡುಮಗುವಿಗೆ ಇತ್ತೀಚೆಗೆ ನಾಮಕರಣ ಕಾರ್ಯಕ್ರಮ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಅಗಸ್ತ್ಯ ಎಂದು ನಾಮಕರಣ ಮಾಡಿದ ಮುರಳಿ ದಂಪತಿ ಕಾರ್ಯಕ್ರಮದಲ್ಲಿ ಸಂತಸದಿಂದ ಉಲ್ಲಸಿತರಾಗಿದ್ದರು. ಮುರಳಿ ಅವರ ಕುಟುಂಬಸ್ಥರಾದ ಅಣ್ಣ ವಿಜಯ್ ರಾಘವೇಂದ್ರ ದಂಪತಿ ಹಾಗೂ ಮುರಳಿ ಅವರ ಅಪ್ಪ ನಿರ್ಮಾಪಕ ಚಿನ್ನೇಗೌಡರ ಜೊತೆಗೆ ಸಿನಿಮಾ ರಂಗದ ದಿಗ್ಗಜರು ಮಗುವಿಗೆ ಶುಭ ಹಾರೈಸಿ ಆಶೀರ್ವದಿಸಿದರು.

ಸಮನಾರಂಭದಲ್ಲಿ ರಾಜ್ ಕುಮಾರ್ ಕುಟುಂಬವರ್ಗವೇ ಹಾಜರಿತ್ತು. ಶಿವರಾಜ್ ಕುಮಾರ್, ಪುನೀತ್ ದಂಪತಿ, ರಾಘವೇಂದ್ರ ರಾಜ್ ಕುಮಾರ್ ದಂಪತಿ, ಪಾರ್ವತಮ್ಮ ರಾಜ್ ಕುಮಾರ್ ಕಾರ್ಯಕ್ರಮದ್ಲಲಿ ಭಾಗವಹಿಸಿ ಮಗುವೆಗೆ ಅಕ್ಕರೆಯ ಶುಭ ಹಾರೈಸಿದರು. ನಟ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ, ತಿಲಕ್, ಲೂಸ್ ಮಾದ ಖ್ಯಾತಿಯ ಯೋಗೀಶ್ ಕುಟುಂಬ, ಅನು ಪ್ರಭಾಕರ್, ಪೂಜಾಗಾಂಧಿ, ಐಂದ್ರಿತಾ ರೇ, ಎಸ್. ನಾರಾಯಣ್ ಸೇರಿದಂತೆ ಚಿತ್ರರಂಗದ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಸದ್ಯಕ್ಕೆ ಮುರಳಿ ಅವರು ಅಗಸ್ತ್ಯನ ಆಗಮನದೊಂದಿಗೆ ತನ್ನ ವೃತ್ತಿ ಜೀವನದಲ್ಲೂ ಖುಷಿಯಾಗಿದ್ದಾರೆ. ಅವರ ಅಭಿನಯದ ಎರಡು ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಒಂದು ಶ್ರೀಹರಿಕಥೆ ಮತ್ತೊಂದು ಸಿಹಿಗಾಳಿ.

ಸಿಹಿಗಾಳಿ ತುಂಬಾನೆ ಹಳೆಯ ಪ್ರಾಜೆಕ್ಟ್. ಇಲ್ಲಿಯ ತನಕ ಚಿತ್ರೀಕರಣ ಆಮೆಗತಿಯಲ್ಲಿ ಸಾಗಿ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಶ್ರೀಹರಿಕಥೆ ಇತ್ತೀಚೆಗೆ ಸೆಟ್ಟೇರಿ ಬಿರುಸಿನಿಂದ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಕಾದಿದೆ.

ತಮಾಷೆಯೆಂದರೆ ಎರಡೂ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರ ಮೊದಲು ಬಿಡುಗಡೆಯಾಗಬೇಕೆಂದು ರಚ್ಚೆ ಹಿಡಿದು ಕುಳಿತಿದ್ದಾರಂತೆ. ಒಟ್ಟಾರೆ ಯಾವುದಾದರೊಂದು ಚಿತ್ರ ಹಿಟ್ ಆದರೆ ಸಾಕು ಎಂದು ತಮ್ಮ ಆಪ್ತರೊಂದಿಗೆ ಹೇಳಿಕೊಳ್ಳುತ್ತಿದ್ದಾರಂತೆ ಮುರಳಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುರಳಿ, ಅಗಸ್ತ್ಯ, ವಿಜಯ್ ರಾಘವೇಂದ್ರ, ಶ್ರೀಹರಿಕಥೆ, ಸಿಹಿಗಾಳಿ