ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮುಳ್ಳಯ್ಯನ ಗಿರಿಯನ್ನು ದಡಬಡನೆ ಹತ್ತಿದ ಜಗ್ಗೇಶ್ (Mullayyana Giri | Jaggesh | Komal | Lift Kodla)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಹೆಬ್ಬಂಡೆ, ದುರ್ಗಮ ಹಾದಿ, ಮುಳ್ಳಿನ ಗಿಡ ಇತ್ಯಾದಿಗಳನ್ನು ಧಾರಾಳವಾಗಿ ತನ್ನಲ್ಲಿ ಅಡಗಿಸಿಕೊಂಡಿರುವ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟವನ್ನು ನಟ ಜಗ್ಗೇಶ್ ಹದಿನೆಂಟರ ಯುವಕನಂತೆ ಪಟಪಟನೆ ಹತ್ತಿ ಜಯ ಸಾಧಿಸಿದ್ದಾರೆ.

ಇದು ಲಿಫ್ಟ್ ಕೊಡ್ಲಾ? ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ. ಬೆಟ್ಟ ಹತ್ತುವುದು ಬೇಡ ಅಂದರೂ ಚಿತ್ರದಲ್ಲಿ ನೈಜತೆ ಇರಬೇಕು ಎಂಬ ಹಟದಿಂದ ಜಗ್ಗೇಶ್, ಬೆಟ್ಟ ಹತ್ತಿ ಶಾಟ್ ಓಕೆ ಮಾಡಿದ್ದಾರೆ.

ನಿಸರ್ಗದ ರಮಣೀಯತೆಯನ್ನೇ ತನ್ನಲ್ಲಿ ಅಡಗಿಸಿಕೊಂಡಿರುವ ಕಳಸ, ಸೈಂಟ್ ಮೇರೀಸ್ ದ್ವೀಪ ಮುಂತಾದೆಡೆ ಚಿತ್ರೀಕರಣವನ್ನು ಮಾಡಲಾಗಿದೆ ಎಂದು ನಿರ್ದೇಶಕ ಅಶೋಕ್ ಕಶ್ಯಪ್ ತಿಳಿಸಿದ್ದಾರೆ. ವಿ.ಮನೋಹರ್ ಸಂಗೀತ, ರಾಮ್ ನಾರಾಯಣ ಸಂಭಾಷಣೆ ಈ ಚಿತ್ರಕ್ಕಿದ್ದು, ಕೋಮಲ್, ಅರ್ಚನಾ ಗುಪ್ತಾ, ಕಿಶೋರ್ ಮುಂತಾದವರು ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುಳ್ಳಯ್ಯನ ಗಿರಿ, ಜಗ್ಗೇಶ್, ಕೋಮಲ್, ಲಿಫ್ಟ್ ಕೊಡ್ಲಾ