ಡಾ.ರಾಜ್ ಸಂಸ್ಥೆ 75ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ ಹಿರಿಮೆ ಹೊಂದಿದೆ. ನಿರ್ಮಿಸಿದ ಚಿತ್ರಗಳಲ್ಲಿ ಹಲವು ರಾಜ್ಯ ಮತ್ತು ರಾಷ್ಟ್ತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರೆ ಕೆಲವು ಚಿತ್ರಗಳು 1ವರ್ಷ, 25 ವಾರ, ಶತದಿನೋತ್ಸವ ಆಚರಿಸಿವೆ. ಇದೇ ಸಂಸ್ಥೆಯ ಮುಂದಿನ ಚಿತ್ರ ಜಾಕಿ.
ಮೊನ್ನೆ ಇದೇ ಚಿತ್ರದ 5 ಗೀತೆಗಳ ಧ್ವನಿಮುದ್ರಣ ಕಾರ್ಯವನ್ನು ಹರಿಕೃಷ್ಣ ಸಂಗೀತದಲ್ಲಿ ಆಕಾಶ್ ಸ್ಟುಡಿಯೋದಲ್ಲಿ ನಡೆಸಲಾಯಿತು.
ಮಾರ್ಚ್ 3ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ನಟ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ. ಚಿತ್ರಕ್ಕೆ ಯೋಗರಾಜ್ ಆರ್.ಭಟ್ ಸಾಹಿತ್ಯ, ಸತ್ಯ ಹೆಗ್ಗಡೆ ಛಾಯಾಗ್ರಹಣ ನೀಡುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ದುನಿಯಾ ಖ್ಯಾತಿಯ ಸೂರಿ ಹೊತ್ತಿದ್ದಾರೆ.