ರಂಗಭೂಮಿಗೂ ಚಿತ್ರರಂಗಕ್ಕೂ ಎಲ್ಲಿಲ್ಲದ ನಂಟು. ರಂಗಭೂಮಿ ಕಲಾವಿದರು ಚಿತ್ರರಂಗಕ್ಕೆ ಬಂದು ಯಶಸ್ವಿಯಾದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂದಿನಿಂದ ತೀರಾ ಈಗಿನ ರಂಗಾಯಣ ರಘು, ರಾಜು ತಾಳಿಕೋಟೆ ಇವರೆಲ್ಲರೂ ರಂಗಭೂಮಿಯಿಂದಲೇ ಬಂದವರು. ಇಗ ಇದೇ ಸಾಲಿಗೆ ಮತ್ತೊಬ್ಬರು ಸೇರಿದ್ದಾರೆ. ಅವರೇ ಚಿಂದೋಡಿ ವಿಜಯ್.
ಇವರು ಚಿಂದೋಡಿ ಕುಟುಂಬಕ್ಕೆ ಸೇರಿದವರು. ವಿಜಯ್ ಹಾಸ್ಯದಲ್ಲಿ ಎತ್ತಿದ ಕೈ. ಕ್ರೇಜಿ ಕುಟುಂಬದಲ್ಲಿ ಸಖತ್ತಾಗಿ ನಟಿಸಿದ ವಿಜಯ್ ಕುಮಾರ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಹಲವು ಚಿತ್ರಗಳಲ್ಲಿ ನಟಿಸಿರುವ ವಿಜಯ್, ಇಂದಿಗೂ ರಂಗಭೂಮಿಯ ನಂಟು ಬಿಟ್ಟಿಲ್ಲ. ನಾಟಕದಲ್ಲಿ ಅಭಿನಯಿಸುವುದನ್ನು ಬಿಡುವುದಿಲ್ಲವಂತೆ. ನಾಟಕವೇ ತನ್ನ ಉಸಿರು, ತಮ್ಮ ತಳಹದಿ ಏನಿದ್ದರೂ ಅದು ರಂಗಭೂಮಿ ಎನ್ನುತ್ತಾರೆ ಚಿಂದೋಡಿ ವಿಜಯ್.