ಸುನೀಲ್ ಪುರಾಣಿಕ್ ಇದೀಗ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರು ನಿರ್ದೇಶಿಸುತ್ತಿರುವ ಮಕ್ಕಳ ಚಿತ್ರದ ಹೆಸರು ಗುರುಕುಲ. ಚಿತ್ರೀಕರಣ ಮುಗಿಸಿ, ಪ್ರಥಮ ಪ್ರತಿ ಹೊರಬಂದು, ಸೆನ್ಸಾರ್ ಮಂಡಳಿಯಿಂದ ಮಕ್ಕಳ ಚಿತ್ರ ಎಂಬ ಸರ್ಟಿಫಿಕೇಟ್ ಪಡೆಯುವಲ್ಲಿ ಯಶಸ್ವಿಯಾಗಿದೆ.
ಸುನೀಲ್ ಪುರಾಣಿಕ್ ತಮ್ಮ ಚೊಚ್ಚಲ ಚಿತ್ರಕ್ಕೆ ಆಯ್ಕೆ ಮಾಡಿಕೊಂಡದ್ದು ಪೌರಾಣಿಕ ಕಥೆಯನ್ನು. ಮಹಾಭಾರತದಲ್ಲಿರುವ ದೌಮ್ಯ ಮಹರ್ಷಿಯ ಗುರುಕುಲ ಕಥೆಯ ಮುಖ್ಯ ಎಳೆ. ಛಾಯಾಗ್ರಾಹಕ ಪಿ.ಕೆ.ಎಚ್ ದಾಸ್, ತಮ್ಮ ಕ್ಯಾಮರಾದಿಂದ ಸಂಪೂರ್ಣ ಹಳೆಯ ಕಾಲಕ್ಕೇ ಕೊಂಡೊಯ್ಯಲಿದ್ದಾರಂತೆ.
ಕಥೆ, ಚಿತ್ರಕಥೆ, ಸಂಭಾಷಣೆ ಪ್ರಹ್ಲಾದ್ ಅವರದ್ದು. ಗೋಪಿ ಅವರ ಸಂಗೀತ, ಶ್ರೀನಿವಾಸ್ ಅವರ ಸಂಕಲನ ಗುರುಕುಲವನ್ನು ಮತ್ತಷ್ಟು ಗಾಢವಾಗಿಸಲಿದೆಯಂತೆ.