ಸ್ಯಾಂಡಲ್ವುಡ್ ಗುರು ಎಂಬ ಚಿತ್ರ ಸದ್ದಿಲ್ಲದೆ ರಾಮನಗರ ಬೆಟ್ಟ ಹಾಗೂ ಬೆಂಗಳೂರು ಸುತ್ತಮತ್ತ ಚಿತ್ರೀಕರಣ ಮುಗಿಸಿದೆ. ಈಗ ಬೆಂಗಳೂರು ಮೂವೀಸ್ ಸ್ಟುಡಿಯೋದಲ್ಲಿ ಉಳಿದ ಕಾರ್ಯಗಳು ನಡೆಯುತ್ತಿವೆ.
ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಮಾನಸ್ ಸ್ಯಾಂಡಲ್‌ವುಡ್ ಗುರು ಚಿತ್ರದ ನಾಯಕ ನಟ ಹಾಗೂ ಅಕ್ಷತಾ ಎಂಬಾಕೆ ನಾಯಕಿ. ಈ ಚಿತ್ರದಲ್ಲಿ ಯಾವುದೇ ಹಾಸ್ಯ ಸನ್ನಿವೇಶಗಳಿರುವುದಿಲ್ಲವಂತೆ. ಬದಲಿಗೆ ಕತ್ತಿ ವರಸೆ ಸೇರಿದಂತೆ ಹಲವು ಸಾಹಸ ದೃಶ್ಯಗಳು ಚಿತ್ರದಲ್ಲಿವೆಯಂತೆ.
ಜೇಮ್ಸ್ ಸಂಗೀತ, ಸಂತೋಷ್ ಛಾಯಾಗ್ರಹಣ, ಮಹೇಶ್ ಸಾಹಿತ್ಯ ಈ ಚಿತ್ರಕ್ಕಿದೆ. ನವ್ಯಾ, ರಮೇಶ್, ಸೌಜನ್ಯ, ಸುಶಾಂತ್, ಶಿವಾನಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.