ಓಂಪ್ರಕಾಶ್ ರಾವ್ ನಿರ್ದೇಶನದ ಹುಲಿ ಚಿತ್ರಕ್ಕೆ ಜೆನ್ನಿಫರ್ ಕೊತ್ವಾಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈವರೆಗೆ ನಾಯಕ ನಟನಾಗಿ ನಟಿಸದಿದ್ದರೂ, ತನ್ನ ಅಭಿನಯದಿಂದ ಪ್ರಮುಖ ಪಾತ್ರಗಳಲ್ಲಿ ಉತ್ತಮವಾಗಿಯ ಮಿಂಚುತ್ತಿದ್ದ ನಟ ಕಿಶೋರ್ ಈ ಹುಲಿ ಚಿತ್ರದ ಮೂಲಕ ನಾಯಕ ನಟನಾಗುತ್ತಿದ್ದಾರೆ. ತಮಿಳಿನಲ್ಲಿ ಈಗಾಗಲೇ ನಾಯಕನಟನಾಗಿ ನಟಿಸಿರುವ ಕಿಶೋರ್ ಬಗ್ಗೆ ಭರವಸೆ ವ್ಯಕ್ತವಾಗಿದೆ. ಈಗ ಕಿಶೋರ್‌ಗೆ ಜೆನ್ನಿಫರ್ ಎಂಬ ಜೋಗಿ ಚಿತ್ರದ ಖ್ಯಾತಿಯ ಜೇನ ಹುಡುಗಿ ನಾಯಕಿಯಾಗಿದ್ದಾಳೆ. ಬಿಸಿಲೆ ಚಿತ್ರ ಬಿಟ್ಟರೆ ಬೇರಾವುದೇ ಚಿತ್ರ ಜೆನ್ನಿ ಕೈಲಿರಲಿಲ್ಲ. ಇದೀಗ ಹುಲಿ ಅವರ ಪಾಲಾಗಿದೆ.
MOKSHA
ಶಿವ ಎಂಟರ್ ಪ್ರೈಸಸ್ ಲಾಂಛನದಲ್ಲಿ ತಯಾರಾಗುತ್ತಿರುವ ಹುಲಿ ನಿರ್ಮಾಪಕರು ಬಿ.ಎಸ್.ಸುಧೀಂದ್ರ. ಇದು ಸುಧೀಂದ್ರ ಅವರ ಮೊದಲ ನಿರ್ಮಾಣದ ಚಿತ್ರ. ಎಂ.ಎಸ್.ರಮೇಶ್ ಸಂಭಾಷಣೆ, ಗೋವರ್ಧನ್ ಸಂಕಲನ ಹುಲಿ ಚಿತ್ರಕ್ಕಿದೆ.
ಮೊದಲ ಬಾರಿಗೆ ಕಿಶೋರ್ ಹುಲಿ ಮೂಲಕ ನಾಯಕರಾಗಿದ್ದು, ಅವರು ಇಲ್ಲೂ ಕೂಡ ಖಾಕಿಧಾರಿ. ಇನ್ನುಳಿದಂತೆ ಶ್ರೀನಿವಾಸ ಮೂರ್ತಿ, ಅವಿನಾಶ್, ಸ್ವಸ್ತಿಕ್ ಶಂಕರ್, ಚಿತ್ರಾಶೆಣೈ ಮುಖ್ಯ ತಾರಾಗಣದಲ್ಲಿದ್ದಾರೆ.