ಸದ್ಯಕ್ಕೆ ದರ್ಶನ್ ಸಾರಥಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ. ಇತ್ತ ದರ್ಶನ್ ಗೆಳೆಯ ಸುದೀಪ್ ಒಂದಾದ ಮೇಲೊಂದು ಚಿತ್ರಗಳಂತೆ ಮಾಡುತ್ತಲೇ ಇದ್ದಾರೆ. ತಮ್ಮ ದಿಟ್ಟ ಹೆಜ್ಜೆಯನ್ನು ಬಾಲಿವುಡ್ಡಿನಲ್ಲೂ ಇಟ್ಟಿದ್ದಾರೆ. ಈ ಬಗ್ಗೆ ದರ್ಶನ್ ಬಗ್ಗೆ ಕೇಳಿದರೆ ಅವರು ನಗುತ್ತಾ, ನಾನು ಸುದೀಪ್ ಹಾಗಲ್ಲ, ನನಗೆ ರೊಮ್ಯಾನ್ಸ್ ಮಾಡೋಕೆ ಗೊತ್ತಿಲ್ಲ ಕಣ್ರೀ ಎನ್ನುತ್ತಾರೆ.
ಸುದೀಪ್ ನನ್ನ ಬೆಸ್ಟ್ ಫ್ರೆಂಡ್ ನಿಜ. ಆದರೆ ಸುದೀಪ್‌ಗೆ ಸೂಟ್ ಆಗುವತಹ ಚಿತ್ರಗಳು ನನಗೆ ಸೂಟ್ ಆಗಲ್ಲ. ನನಗೆ ರೋಮ್ಯಾನ್ಸ್ ಮಾಡೋ ಪಾತ್ರಗಳು ಅಷ್ಟಾಗಿ ರುಚಿಸೋದಿಲ್ಲ, ಅವುಗಳಲ್ಲಿ ಅಭಿನಯಿಸೋದಕ್ಕೂ ನನ್ನ ವ್ಯಕ್ತಿತ್ವಕ್ಕೆ ಅಷ್ಟು ಸರಿಬರಲ್ಲ. ಸುದೀಪ್‌ಗೆ ಲವರ್ ಬಾಯ್ ಪಾತ್ರಗಳೂ ಸೂಟ್ ಆಗುತ್ತೆ. ಆದರೆ ನನಗೆ ಹಾಗಲ್ಲ. ನಾನು ಆಕ್ಷನ್ ಚಿತ್ರಗಳನ್ನಷ್ಟೇ ಇಷ್ಟಪಡ್ತೇನೆ. ಅವೇ ನನಗೆ ಹೊಂದೋದು. ಹಾಗಾಗಿ ನನ್ನ ಚಿತ್ರಗಳಲ್ಲಿ ಐಟಂ ಸಾಂಗ್ ಇದ್ದರೂ ನಾನು ನನ್ನ ಕೊರಿಯೋಗ್ರಾಫರ್‌ಗೆ, ದಯವಿಟ್ಟು ನನಗೆ ಹೀರೋಯಿನ್‌ಳನ್ನು ಮುಟ್ಟದೇ ಮುಖದಲ್ಲೇ ವ್ಯಕ್ತಪಡಿಸುವಂಥ ಸ್ಟೆಪ್‌ಗಳನ್ನು ಹಾಕಿಕೊಡಿ ಅನ್ನುತ್ತೇನೆ. ಯಾಕೆಂರೆ ನನಗೆ ಪೂರ್ಣ ಪ್ರಮಾಣದ ರೊಮ್ಯಾಂಟಿಕ್ ಸಿನೆಮಾ ಹೊಂದೋದಿಲ್ಲ ಎನ್ನುತ್ತಾರೆ ದರ್ಶನ್.
MOKSHA
ಸುದೀಪ್ ಥರಾನೇ ನಿಮಗೇನಾದರೂ, ನಿರ್ದೇಶಕರಾಗುವ ಯೋಚನೆ ಇದೆಯೇ ಎಂದರೆ, ಸುದೀಪ್ ನನಗೆ ಅತ್ಯುತ್ತಮ ಗೆಳೆಯ. ಆತ ದಿನ 24 ಗಂಟೆಯೂ ಸಿನಿಮಾ ಬಗ್ಗೆಯೇ ಮಾತನಾಡಬಲ್ಲ, ಕೆಲಸ ಮಾಡಬಲ್ಲ. ಆದರೆ ನಾನು ಹಾಗಲ್ಲ, ನಾನು ಕೇವಲ ದಿನದ ಬೆಳಗ್ಗೆ 7ರಿಂದ ಸಂಜೆ ಆರು ಗಂಟೆವರೆಗೆ ಮಾತ್ರ ನನ್ನ ಸಿನಿಮಾ ವೃತ್ತಿಯನ್ನು ತೆಗೆದುಕೊಳ್ಳುವವನು. ಹಾಗಾಗಿ ನನಗೆ ನಿರ್ದೇಶಕ ಆಗುವ ಕನಸಿಲ್ಲ ಎನ್ನುತ್ತಾರೆ ದರ್ಶನ್.
ಸುದೀಪ್ ಇತ್ತೀಚೆಗಷ್ಟೆ ದರ್ಶನ್ ನಾಯಕತ್ವದ ಚಿತ್ರವನ್ನು ನಿರ್ದೇಶಿಸಬೇಕೆಂಬ ಕನಸಿದೆ ಎಂದಿದ್ದರು. ನಿಮಗೆ ಸುದೀಪ್ ನಿರ್ದೇಶನದಲ್ಲಿ ನಟಿಸುವ ಯೋಚನೆಯಿದೆಯಾ ಎಂದರೆ, ಖಂಡಿತಾ, ಇದಕ್ಕೆ ನನ್ನ ಶೇ.100 ಒಪ್ಪಿಗೆಯಿದೆ. ನಾವು ಯಾವಾಗಲೂ ನಮ್ಮಿಬ್ಬರ ಚಿತ್ರಗಳ ಬಗ್ಗೆ ತುಂಬ ಮಾತಾಡ್ತೇವೆ, ಚರ್ಚೆ ಮಾಡ್ತೇವೆ. ನಾವಿಬ್ಬರೂ ಒಂದು ಚಿತ್ರ ಮಾಡಬೇಕೆಂಬ ಯೋಚನೆಯಿದೆ. ಸುದೀಪ್ ನಿರ್ದೇಶಿಸಿ ನಾನು ನಟಿಸುವ ಈ ಚಿತ್ರ ನಮ್ಮದೇ ಬ್ಯಾನರ್ ಅಡಿ ತರುವ ಚಿಂತನೆಯೂ ಇದೆ. ಆದರೆ ಆ ಬಗ್ಗೆ ಇನ್ನೂ ಏನೂ ಮಾತಾಗಿಲ್ಲ. ಕಾಲ ಕೂಡಿ ಬಂದರೆ ಜೊತೆಗೆ ಕೆಲಸ ಮಾಡುತ್ತೇವೆ. ನಾವಿಬ್ಬರೂ ಜೊತೆಗೆ ಒಂದು ಚಿತ್ರದಲ್ಲಿ ನಟಿಸುವ ಆಸೆಯೂ ಇದೆ. ಜೊತೆಗೆ ನಟಿಸಿದರೆ ಖಂಡಿತಾ ಅಣ್ಣತಮ್ಮಂದಿರಾಗಿ ನಟಿಸುತ್ತೇವೆ ಎನ್ನುತ್ತಾರೆ ದರ್ಶನ್.
ಸದ್ಯಕ್ಕೆ ದರ್ಶನ್ ಕೈಯಲ್ಲಿ ಸಾರಥಿ, ಶೌರ್ಯ, ಓಂಪ್ರಕಾಶ್ ನಿರ್ದೇಶನದ ಪ್ರಿನ್ಸ್ ಹಾಗೂ ಸಂಗೊಳ್ಳಿ ರಾಯಣ್ಣ ಚಿತ್ರಗಳಿವೆ. ಸಂಗೊಳ್ಳಿ ರಾಯಣ್ಣ ಚಿತ್ರ ಐತಿಹಾಸಿಕ ಚಿತ್ರವಾಗಿದ್ದು, ಸದ್ಯಕ್ಕೆ ದರ್ಶನ್ ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ಓದೋದರಲ್ಲಿ ಬ್ಯುಸಿಯಂತೆ.