ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನನ್ನ ಹೆಂಡತಿಗೆ ನಾನೇನು ಅಂತ ಗೊತ್ತು ಬಿಡಿ: ವಿಜಯ್! (Duniya Vijay | Shubha Punja | Kari Chirathe | Kanteerava)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಶುಭಾ ಪೂಂಜಾ ಜೊತೆಗೆ ಖಾಸಗಿ ಜೀವನದಲ್ಲೂ ಸಾಕಷ್ಟು ಸುದ್ದಿ ಮಾಡಿದ ದುನಿಯಾ ಖ್ಯಾತಿಯ ವಿಜಯ್ ಮತ್ತೊಮ್ಮೆ ಶುಭಾ ಪೂಂಜಾ ಜೊತೆಗೆ ತೆರೆಯ ಮೇಲೆ ಒಂದಾಗುತ್ತಿದ್ದಾರೆ. ರಾಮು ನಿರ್ಮಾಣದ ಕಂಠೀರವ ಚಿತ್ರದಲ್ಲಿ ವಿಜಯ್ ಜೊತೆಗೆ ಇಬ್ಬರು ನಾಯಕಿಯರು ಅಭಿನಯಿಸುತ್ತಿದ್ದಾರೆ. ಒಬ್ಬರು ಶುಭಾ ಪೂಂಜಾ, ಮತ್ತೊಬ್ಬರು, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪುತ್ರಿ ರೋಹಿಣಿ (ರಿಷಿಕಾ).

ಹೌದು. ವಿಜಯ್, ಶುಭಾ ಪೂಂಜಾ ಜೋಡಿ ಜೊತೆಯಾಗಿ ತೆರೆಗೆ ಬರದೆ ಸಮಯವಾಯಿತು. ಈ ಜೋಡಿ ತೆರೆಯ ಮೇಲೆ ಸುದ್ದಿ ಮಾಡಿದ್ದಕ್ಕಿಂತಲೂ ತೆರೆಯ ಹಿಂದೆ ಪಿಸುಮಾತುಗಳಿಗೆ ಆಸ್ಪದ ಮಾಡಿಕೊಟ್ಟಿದ್ದೇ ಹೆಚ್ಚು. ಅದೇನೇ ಇರಲಿ, ಎಷ್ಟೇ ಸುದ್ದಿಯಾದರೂ ಈ ಇಬ್ಬರು ಮಾತ್ರ ನಾವಿಬ್ಬರೂ ಫ್ರೆಂಡ್ಸ್ ಅಂತಲೇ ಓಡಾಡಿಕೊಂಡಿದ್ದಾರೆ. ಅದೇನೇ ಇರಲಿ, ಮತ್ತೆ ಶುಭಾ ಪೂಂಜಾ ಜೊತೆಗೆ ಬರುತ್ತಿದ್ದೀರಲ್ಲಾ, ನಿಮ್ಮಿಬ್ಬರ ನಡುವೆ ಗಾಸಿಪ್ಪೂ ಇದೆ ಅದಕ್ಕೇನಂತೀರಾ ಎಂದರೆ ವಿಜಯ್ ಮಾತ್ರ ತಲೆಕೆಡಿಸಿಕೊಳ್ಳದೆ, ನನ್ನ ಹಾಗೂ ಶುಭಾ ಜೋಡಿ ತೆರೆಯ ಮೇಲೆ ಚೆನ್ನಾಗಿರುತ್ತದೆ. ನಾನು ನಿಜ ಜೀವನದಲ್ಲೂ ಉತ್ತಮ ಗೆಳೆಯರು. ಚಂಡ ಚಿತ್ರದ ನಂತರ ಹಲವರು ನಾವು ಜೋಡಿಯಾಗಲು ಬಯಸಿದ್ದರು. ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಈಗ ಕಾಲ ಕೂಡಿ ಬಂದಿದೆ. ನಮ್ಮಿಬ್ಬರ ಜೋಡಿ ಚೆನ್ನಾಗಿದೆ. ಅದು ಸ್ಯಾಂಡಲ್‌ವುಡ್ಡಿಗೂ ಒಳ್ಳೆಯದು ಎನ್ನುತ್ತಾರೆ.
MOKSHA


ಈ ದುನಿಯಾದಲ್ಲಿ ಯಾರೂ ಸಾಚಾ ಅಲ್ಲ. ಎಲ್ಲ ಕಡೆಯೂ ಕಳ್ ನನ್ ಮಕ್ಳು ಕಾಲೆಳೆಯೋದಿಕ್ಕೆ ಇದ್ದೇ ಇರ್ತಾರೆ. ನಾನು ನನ್ನ ವೃತ್ತಿ ಜೀವನದಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಅವರು ಧಾರಾಳವಾಗಿ ಮಾತಾಡ್ಲಿ ಬಿಡಿ. ಆದರೆ ನನ್ನ ಖಾಸಗಿ ಜೀವನವನ್ನು ಯಾಕೆ ಫೋಕಸ್ ಮಾಡ್ತಾರೋ ಅರ್ಥವಾಗ್ತಿಲ್ಲ. ಆದರೆ ನ್ನ ಖಾಸಗಿ ಜೀವನದ ಬಗ್ಗೆ ಮಾತಾಡೋದ್ರಿಂದ ಅವರಿಗೆ ನೆಮ್ಮದಿ, ಖುಷಿ ಸಿಗುತ್ತೆ ಅಂತಾದ್ರೆ ಮಾತಾಡ್ಲಿ ಬಿಡಿ ಎನ್ನುತ್ತಾರೆ ದುನಿಯಾ ಖ್ಯಾತಿಯ ವಿಜಯ್.

ನಿಮ್ಮ ಹಾಗೂ ಶುಭಾ ನಡುವಿನ ಗಾಸಿಪ್ ನಿಮ್ಮ ಹೆಂಡತಿಗೆ ಗೊತ್ತಿಲ್ಲವೇ? ಆಕೆ ಇಂಥದ್ದಕ್ಕೆಲ್ಲಾ ಏನು ಪ್ರತಿಕ್ರಿಯಿಸುತ್ತಾರೆ? ಎಂದರೆ ವಿಜಯ್ ತುಂಬಾ ಕೂಲ್ ಆಗಿ, ನನ್ನ ಹೆಂಡತಿ ನನ್ನ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾಳೆ. ಆಕೆಗೆ ಕಲಾವಿದರ ಬಗ್ಗೆ ತಿಳುವಳಿಕೆಯೂ ಇದೆ. ಎಲ್ಲ ಕಲಾವಿದರ ಬಗ್ಗೆಯೂ ಇಂಥದ್ದೊಂದು ಕಥೆ ಕಟ್ಟುತ್ತಾರೆಂದು ಆಕೆಗೆ ಗೊತ್ತು ಎನ್ನುತ್ತಾರೆ.

ಮತ್ತೊಮ್ಮೆ ವಿಜಯ್, ಶುಭಾ ಪೂಂಜಾ ಜೋಡಿ ಏನು ಮೋಡಿ ಮಾಡುತ್ತದೋ ನೋಡಬೇಕು!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಜಯ್, ದುನಿಯಾ, ಶುಭಾ ಪೂಂಜಾ, ರಿಷಿಕಾ, ಕಂಠೀರವ