ವಿಜಯ ರಾಘವೇಂದ್ರ ಈಗ ಆಟಗಾರ!
ವಿಜಯ ರಾಘವೇಂದ್ರ ಅವರ ಹಲವು ಚಿತ್ರಗಳು ತೆರೆ ಕಾಣುವ ಮುನ್ನವೇ ಅವರು ಮತ್ತೊಂದು ಚಿತ್ರದಲ್ಲಿ ಅಭಿನಯಿಸಲು ಹೊರಟಿದ್ದಾರೆ. ಸತ್ಯನಾರಾಯಣ ನಿರ್ಮಿಸುತ್ತಿರುವ ಈ ಚಿತ್ರದ ಹೆಸರು ಆಟಗಾರ. ಈ ಚಿತ್ರವನ್ನು ನಿರ್ಮಾಪಕರ ಸಹೋದರ ಜಯಂತ್ ನಿರ್ದೇಶಿಸುತ್ತಿದ್ದಾರೆ.ಆಟಗಾರ ಒಂದು ಕೌಟುಂಬಿಕ ಚಿತ್ರ. ಮುಖ್ಯವಾಗಿ ಮಾವ ಅಳಿಯನ ಸುತ್ತ ಕಥೆ ಸುತ್ತಲಿದೆಯಂತೆ. ಚಿತ್ರ ಹಾಸ್ಯದ ಲೇಪನ ಹೊಂದಿರುತ್ತದೆ ಎಂಬುದಂತೂ ಖಚಿತ. ನಟಿ ಮೇಘನಾ ಈ ಚಿತ್ರದ ನಾಯಕಿ.ಅಂದಹಾಗೆ ಆಟಗಾರ ಹೆಸರು ಬದಲಾಗು ಸಾಧ್ಯತೆಗಳಿವೆಯಂತೆ. ಉತ್ತಮ ಶೀರ್ಷಿಕೆ ಸಿಕ್ಕಲ್ಲಿ ಚಿತ್ರದ ಹೆಸರನ್ನು ಬದಲಾಯಿಸಲಾಗುತ್ತದೆ ಎನ್ನುತ್ತಾರೆ ನಿರ್ಮಾಪಕ ಸತ್ಯನಾರಾಯಣ.