ಕನ್ನಡ ಮರೆತ ನಟ ಈ ಅಬ್ಬಾಸ್!
ಕನ್ನಡದಲ್ಲೇ ಹುಟ್ಟಿ, ಕನ್ನಡದಲ್ಲೇ ಬೆಳೆದ ಕೆಲವು ನಟರಿಗೆ ಕನ್ನಡ ಭಾಷೆಯ ಮೇಲೆ ಬಹಳ ತಾತ್ಸಾರ. ಅಂತಹ ನಟನಟಿಯರು ಬೇಕಾದಷ್ಟು ಮಂದಿ ಇದ್ದಾರೆ. ಇವರ ಸಾಲಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಅವರೇ ಅಬ್ಬಾಸ್.ಅಬ್ಬಾಸ್ ಸುಮಾರು 10 ವರ್ಷದ ಹಿಂದೆ ಶಾಂತಿ ಶಾಂತಿ ಶಾಂತಿ ಎಂಬ ಕನ್ನಡದ ತೋಪು ಚಿತ್ರದಲ್ಲಿ ನಟಿಸಿದ್ಧರು. ಆಮೇಲೆ ಕನ್ನಡದತ್ತ ತಲೆ ಹಾಕಿರಲಿಲ್ಲ ಈ ಅಬ್ಬಾಸ್. ಇದೀಗ ಅಪ್ಪು ಪಪ್ಪು ಚಿತ್ರದಲ್ಲಿ ನಟಿಸಲು ಮತ್ತೆ ಬಂದಿದ್ದಾರೆ ಗಾಂಧಿ ನಗರಿಗೆ. ಅಬ್ಬಾಸ್ ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ, ಹಾಗಾಗಿ ಅವರು ಕನ್ನಡಿಗರು. ಮೊನ್ನೆ ಅಪ್ಪು ಪಪ್ಪು ಚಿತ್ರದ ಪತ್ರಿಕಾಗೋಷ್ಠಿಗೆ ಆಗಮಿಸಿದ್ಧ ಅಬ್ಬಾಸ್ ಬರಿಯ ಇಂಗ್ಲೀಷಿನಲ್ಲಿಯೇ ಮಾತನಾಡುತ್ತಿದ್ದರು. ಅಪ್ಪಿ ತಪ್ಪಿಯೂ ಒಂದೇ ಒಂದು ಕನ್ನಡ ಪದ ಅವರ ಬಾಯಿಂದ ಬರಲಿಲ್ಲ.ಕನ್ನಡ ಮರೆತುಬಿಟ್ಟಿರೇ? ಎಂಬ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಹೀಗಿತ್ತು, 'ಐ ಯಾಮ್ ಸಾರಿ. ಐ ಟ್ರೈ ನೆಕ್ಸ್ಟ್ ಟೈಂ ಟು ಟಾಕ್ ಇನ್ ಕನ್ನಡ' ಅಂತ ಇಂಗ್ಲೀಷಿನಲ್ಲೇ ಹೇಳುತ್ತಾರೆ. ಅಬ್ಬಬ್ಬಾ ಅಬ್ಬಾಸ್!!!