ಸವಾರಿ ಚಿತ್ರದ ಖ್ಯಾತಿಯ ನಾಯಕ ರಘು ಮುಖರ್ಜಿ ತಾನು ಸುತಾರಾಂ ಪೂಜಾ ಗಾಂಧಿಯ ತುಟಿಗೆ ಚುಂಬಿಸಲ್ಲ ಅನ್ನೋ ಮೂಲಕ ನಿರ್ದೇಶಕ, ನಿರ್ಮಾಪಕರಿಗೂ ಅಚ್ಚರಿ ಮೂಡಿಸಿದ್ದಾರೆ.
ಕೆಲವು ನಟಿಯರು ಚುಂಬನ ಒಲ್ಲೆ ಎನ್ನೋದು ಸಹಜ, ಆದ್ರೆ ನಟರು ಯಾವತ್ತೂ ಚುಂಬಿಸಲ್ಲ ಎಂದು ಹೇಳಿದ್ದಿಲ್ಲ, ಆದರೆ ಇಲ್ಲಿ ರಘು ಮುಖರ್ಜಿ ಮಾತ್ರ ಯಾಕಪ್ಪಾ ಚುಂಬಿಸಲ್ಲ ಅಂತ ಹಠ ಹಿಡಿದು ಕೂತಿದ್ದಾರೆ ಎಂಬುದು ಚಿತ್ರತಂಡ ತಲೆಕೆರೆದುಕೊಳ್ಳುತ್ತಿದೆ. ನಿರ್ದೇಶಕರು ಮತ್ತೊಮ್ಮೆ ರಘು ಮುಖರ್ಜಿಯವರನ್ನು ಒಪ್ಪಿಸಲು ಸಾಕಷ್ಟು ಪ್ರಯತ್ನಿಸಿದರೂ, ಚುಂಬನ ಗಿಂಬನ ಏನೂ ಬೇಡ ಸಾರ್, ನಾನು ಸಂಸಾರಸ್ಥ ಎಂದಿದ್ದಾರಂತೆ ರಘು ಮುಖರ್ಜಿ!
ಇನ್ನೂ ಹೆಸರಿಡದ ಶಿವಗಣಪತಿ ನಿರ್ದೇಶೀಸುತ್ತಿರುವ ಚಿತ್ರದಲ್ಲಿ ರಘು ಮತ್ತು ಪೂಜಾ ಗಾಂಧಿ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ದೃಶ್ಯವೊಂದರಲ್ಲಿ ರಘು ನಟಿ ಪೂಜಾಳ ತುಟಿಗೆ ತುಟಿಯೊತ್ತಿ ಚುಂಬಿಸಬೇಕಿತ್ತಂತೆ. ಈ ಸನ್ನಿವೇಶ ಬೇಡವೇ ಬೇಡ ಎಂದು ರಘು ಪಟ್ಟು ಹಿಡಿದು ಕುಳಿತಿದ್ದರಂತೆ.
ಬಟ್ಟೆ ತ್ಯಜಿಸಿ ದೇಹ ಪ್ರದರ್ಶಿಸುವುದು, ತುಟಿಗೆ ಚುಂಬಿಸುವುದು ರಘು ಅವರಿಗೆ ಕೊಂಚವೂ ಇಷ್ಟವಿಲ್ಲವಂತೆ. ಹಾಗಾಗಿ ಈ ಚುಂಬನದ ಸನ್ನಿವೇಶವನ್ನು ನಯವಾಗಿ ತಿರಸ್ಕರಿಸಿದ್ದಾರಂತೆ.