ಸದಭಿರುಚಿಯ ಚಿತ್ರಗಳನ್ನು ಕನ್ನಡಿಗರು ಖಂಡಿತ ಕೈ ಬಿಡುವುದಿಲ್ಲ ಎಂಬ ನಂಬಿಕೆಯಿದೆ ಎನ್ನುತ್ತಾರೆ ರಾಜೇಶ್ ನಾಯರ್. ಮೂಲತಃ ಮುಂಬೈಯವರಾದ ನಾಯರ್, ಇದೀಗ ಮಂದಹಾಸ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.
ಮುಂಬೈನಲ್ಲಿ ಯುಟಿವಿ ಪಿಕ್ಚರ್ಸ್‌ನಲ್ಲಿ ಈಗಾಗಲೇ ಬೆಟ್ಟದಷ್ಟು ಹೆಸರು ಮಾಡಿದ್ದಾರೆ ನಾಯರ್. ಹೀಗಿದ್ದೂ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ. ಶಾಹಿದ್ ಕಪೂರ್ ಅಭಿನಯದ ಬಾಲಿವುಡ್ ಚಿತ್ರ 'ಕಮೀನೇ'ಗೆ ಇವರು ಕಾರ್ಯಕಾರಿ ನಿರ್ಮಾಪಕರಾಗಿದ್ದರು.
ಕನ್ನಡದಲ್ಲಿ ಒಂದು ಚಿತ್ರವನ್ನು ನಿರ್ದೇಶಿಸಬೇಕೆಂದು ಕನಸು ಕಂಡ ನಾಯರ್ ಕೊನೆಗೂ ಮಂದಹಾಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬಸವರೆಡ್ಡಿ ನಿರ್ಮಾಣದ ಮಂದಹಾಸ ಚಿತ್ರದಲ್ಲಿ ಹೊಸ ಹುಡುಗರಾದ ರಾಕೇಶ್ ಹಾಗೂ ಚೇತನ್ ನಾಯಕರು. ಮತ್ತೊಬ್ಬ ಹೊಸ ಪ್ರತಿಭೆ ನಿಕ್ಕಿ ನಾಯಕಿ.