ಪತ್ರಕರ್ತ ಸದಾಶಿವ ಶೆಣೈ ಅವರ ಮೊದಲ ನಿರ್ದೇಶನದ ಪ್ರಾರ್ಥನೆ ಚಿತ್ರದ ಪ್ರಮುಖ ಪಾತ್ರವೊಂದನ್ನು ಪವಿತ್ರಾ ಲೋಕೇಶ್ ಮಾಡಲು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಇದೇ ಪಾತ್ರಕ್ಕೆ ಸುಧಾರಾಣಿ ಆಯ್ಕೆಯಾಗಿದ್ದಾರೆ ಎಂದು ಸುದ್ದಿಯಾಗಿದ್ದರೂ, ಸುಧಾರಾಣಿ ಕೊನೇ ಗಳಿಗೆಯಲ್ಲಿ ತಾನು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ ಎಂದಿದ್ದರು. ಅಂದು ಖಾಲಿಯಾಗಿದ್ದ ಸ್ಥಾನವನ್ನು ಇಂದು ಪವಿತ್ರ ತುಂಬಿದ್ದಾರೆ.
ಅಲ್ಲದೇ ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಹಿರಿಯ ನಟ ಅಶೋಕ್ ಬಹಳ ದಿನಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ನಿರ್ದೇಶಕ ಗುರುಪ್ರಸಾದ್, ಪ್ರಕಾಶ್ ರಾಜ್ ಕೂಡಾ ಶೆಣೈ ಮೇಲಿನ ವಿಶ್ವಾಸಕ್ಕೆ ನಟಿಸುತ್ತಿರುವುದು ಹಳೆಯ ಸುದ್ದಿಯಾದರೂ ಸತ್ಯ. ಹರೀಶ್ ನಿರ್ಮಾಣದ ಪ್ರಾರ್ಥನೆಗೆ ವೀರಸಮರ್ಥ್ ಸಂಗೀತ, ಎಸ್.ರಾಮಚಂದ್ರ ಛಾಯಾಗ್ರಹಣವಿದೆ.