ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ. ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ರಂಗಪ್ಪ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಭಾರತಿ ವಿಷ್ಣುವರ್ಧನ್ ಅವರು ಹಿರಿಯ ನಟಿಯಾಗಿದ್ದು ಸಾಕಷ್ಟು ಚಿತ್ರಗಳಲ್ಲಿ ಮಿಂಚಿದ್ದರು. ರಾಜ್ ಕುಮಾರ್ ಜೊತೆಗೆ ಜೋಡಿಯಾಗಿ ನಟಿಸಿದ್ದ ಇವರ ಜೋಡಿ ಜನಪ್ರಿಯತೆ ಪಡೆದಿತ್ತು. ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ ಭಾರತಿ ವಿಷ್ಣುವರ್ಧನ್ ಚಿತ್ರರಂಗದ ದೊಡ್ಡ ಹೆಸರು. ಕೆಲವು ವರ್ಷಗಳ ಹಿಂದಷ್ಟೇ ಬೆಂಗಳೂರು ವಿಶ್ವವಿದ್ಯಾನಿಲಯ ಭಾರತಿ ಅವರ ಪತಿ ಮೇರು ನಟ ವಿಷ್ಣುವರ್ಧನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಇದೀಗ ಪತ್ನಿ ಭಾರತಿ ವಿಷ್ಣುವರ್ಧನ್ ಕೂಡಾ ಇದೇ ಪುರಸ್ಕಾರಕ್ಕೆ ಮೈಸೂರಿನ ಕರ್ನಾಟಕ ವಿವಿಯಿಂದ ಪಾತ್ರರಾಗಿದ್ದಾರೆ.
ಮಾ.4ರಂದು ನಡೆಯುವ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಇತರ 3 ಮೂರು ಮಂದಿಯ ಜೊತೆಗೆ ಭಾರತಿ ಅವರಿಗೂ ಗೌರವ ಡಾಕ್ಟರೇಟ್ ನೀಡಿ ವಿವಿ ಗೌರವಿಸಲಿದೆ. ಚಿತ್ರರಂಗ ಕ್ಷೇತ್ರದಲ್ಲಿದ ಭಾರತಿಯವರ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್‌ಗೆ ವಿವಿ ಆಯ್ಕೆ ಮಾಡಿದೆ.