ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿತ್ರಸಾಹಿತಿ ಜಯಂತ ಕಾಯ್ಕಿಣಿಗೆ ಕುಸುಮಾಗ್ರಜ ಪ್ರಶಸ್ತಿ (Jayanth Kaykini | Kusumagraja Award | Mungaru Male)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕವಿ, ಕಥೆಗಾರ, ಚಿತ್ರಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ಕುಸುಮಾಗ್ರಜ ರಾಷ್ಟ್ರೀಯ ಪ್ರಶಸ್ತಿ ಸಂದಿದೆ.

ನಾಸಿಕ್‌ನ ಯಶವಂತ್ ರಾವ್ ಚವ್ಹಾಣ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾನಿಲಯ ಮತ್ತು ಕುಸುಮಾಗ್ರಜ ಪ್ರತಿಷ್ಠಾನ ಜಂಟಿಯಾಗಿ ಈ ಪ್ರಶಸ್ತಿ ಆರಂಭಿಸಿದ್ದು, ಪ್ರತಿಷ್ಠಾನದ ಚೊಚ್ಚಲ ಪ್ರಶಸ್ತಿಗೆ ಜಯಂತ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಬಹುಮಾನ, ಫಲಕ, ಶಾಲು ಒಳಗೊಂಡಿದೆ.

ಪ್ರತಿಭಾನ್ವಿತ ಸಾಹಿತಿಯಾಗಿರುವ ಜಯಂತ್ ಕಾಯ್ಕಿಣಿ ತಮ್ಮ ಕವನಗಳಂತೆಯೇ ಸಣ್ಣ ಕಥೆಗಳ ಮೂಲಕವೂ ಮೋಡಿ ಮಾಡಿದವವರು. ತಮ್ಮ 19ನೇ ವಯಸ್ಸಿನಲ್ಲಿಯೇ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿಗೆ ಭಾಜನರಾದವರು. ಅದಾದ ಮೇಲೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದ ಜಯಂತ್ ಹೊಸ ತಲೆಮಾರಿನ ಸಾಹಿತಿಯೆಂದೇ ಗುರುತಿಸಿಕೊಂಡವರು.

ಮುಂಗಾರು ಮಳೆ ಚಿತ್ರದ ಹಾಡುಗಳ ಸಾಹಿತ್ಯದಿಂದಾಗಿ ಮನೆಮಾತಾದ ಕಾಯ್ಕಿಣಿ ನಂತರ ಚಿತ್ರರಂಗದಲ್ಲಿ ಸಾಲು ಸಾಲು ಗೀತೆಗಳನ್ನು ನೀಡುತ್ತಲೇ ಬಂದಿದ್ದಾರೆ. ಮಾ.13ರಂದು ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಯಂತ ಕಾಯ್ಕಿಣಿ, ಕುಸುಮಾಗ್ರಜ ಪ್ರಶಸ್ತಿ, ಮುಂಗಾರು ಮಳೆ