ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರೂಪಿಕಾ ಎಂಬ ಹದಿಹರೆಯದ ಚೆಲುವೆಯ 'ಕಾಲ್ಗೆಜ್ಜೆ'! (Roopika | Kalgejje | Cheluvina Chilipili | S. Narayan)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕೆಲವೇ ವರ್ಷದ ಹಿಂದೆ ಚೆಲುವಿನ ಚಿತ್ತಾರ ಬರೆದ ಅಮೂಲ್ಯ ಈಗ ಕಾಲೇಜು ಸೇರಿದ್ದಾಗಿದೆ. ಅಂದು ಅಮೂಲ್ಯ ಸೃಷ್ಟಿಸಿದಂತೆಯೇ ಈಗ ಸೆನ್ಸೇಶನ್ ಸೃಷ್ಟಿಸುತ್ತಿರುವ ಹೈಸ್ಕೂಲು ಹುಡುಗಿಯೆಂದರೆ ರೂಪಿಕಾ.

ಹೌದು ರೂಪಿಕಾ ಹದಿಹರೆಯದ ಬೆಡಗಿ. ಅಮೂಲ್ಯರಂತೆಯೇ ಈಕೆಯೂ ಕೂಡಾ ಎಸ್. ನಾರಾಯಣ್ ಗರಡಿಯಿಂದಲೇ ಸಿನಿಮಾ ರಂಗಕ್ಕೆ ನಾಯಕಿ ನಟಿಯಾದವಳು. ರೂಪಿಕಾ ಕಳೆದ ವರ್ಷಎಸ್.ನಾರಾಯಣ್ ಮಗ ಪಂಕಜ್ ಜೊತೆಗೆ ಚೆಲುವಿನ ಚಿಲಿಪಿಲಿ ಚಿತ್ರದಲ್ಲಿ ನಟಿಸಿದ್ದಳು. ಆದರೆ ಅಮೂಲ್ಯರಂತೆ ಈಕೆ ಯಶಸ್ಸನ್ನು ಪಡೆದಿರಲಿಲ್ಲ!

ಸದ್ಯಕ್ಕೀಗ ಈ ಬಬ್ಲೀ ತಾರೆ ಕಾಲ್ಗೆಜ್ಜೆ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಕಾಲ್ಗೆಜ್ಜೆ ಚಿತ್ರದಲ್ಲಿ ರೂಪಿಕಾಳದ್ದು ಭರತನಾಟ್ಯ ನೃತ್ಯ ಕಲಾವಿದೆಯ ಪಾತ್ರ. ಈಕೆ ನಿಜ ಜೀವನದಲ್ಲೂ ಕೂಡ ಭರತನಾಟ್ಯ ಕಲಾವಿದೆ. ಹಾಗಾಗಿ ಈಕೆಗೆ ಭರತನಾಟ್ಯ ಕಲಾವಿದೆಯ ಪಾತ್ರವನ್ನು ಚಿತ್ರವೊಂದರಲ್ಲಿ ಮಾಡುವ ಆಸೆಯಿತ್ತು. ಆದರೆ ಆ ಆಸೆ ಇಷ್ಟು ಬೇಗ ಈಡೇರುತ್ತೆ ಅಂತ ಸ್ವತಃ ರೂಪಿಕಾಗೂ ಗೊತ್ತಿರಲಿಲ್ಲವಂತೆ!

ನನ್ನ ಎರಡನೇ ಚಿತ್ರ ಕಾಲ್ಗೆಜ್ಜೆ. ನಿರ್ದೇಶಕ ಬಂಗಾರು ಇಂತಹ ಪಾತ್ರವೊಂದನ್ನು ನನಗೆ ನೀಡುತ್ತೇನೆಂದು ಆಫರ್ ಮಾಡಿದಾಗ ನನಗೆ ತುಂಬಾ ಖುಷಿ ಆಯ್ತು. ಅವರು ಸ್ವಲ್ಪ ಭರತನಾಟ್ಯ ಟ್ರೈನಿಂಗ್ ಕೊಡಿಸುತ್ತೇನೆಂದಾಗ, ನಾನೇ ಬೇಡವೆಂದೆ. ನಾನು ಈಗಾಗಲೇ ಹಲವಾರು ಭರತನಾಟ್ಯ ಸ್ಟೇಜ್ ಶೋಗಳನ್ನು ನೀಡಿದ್ದೇನೆಂದೆ. ಈ ಚಿತ್ರದಲ್ಲಿ ಹಲವಾರು ಭರತನಾಟ್ಯಂ ಸೀಕ್ವೆಂನ್ಸ್‌ಗಳಲ್ಲಿ ನಾನು ನಟಿಸಿದ್ದೇನೆ. ಮೇಲುಕೋಟೆಯಲ್ಲಿ ಒಂದು ಶೂಟಿಂಗ್ ನಡೆದಿದೆ. ಭರತನಾಟ್ಯದಲ್ಲಿ ತುಂಬ ಪ್ರವೀಣರಾಗಿರುವ ನಟ ಶ್ರೀಧರ್ ಜೊತೆ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬ ಖುಷಿ ಆಗುತ್ತಿದೆ ಎನ್ನುತ್ತಾರೆ ರೂಪಿಕಾ.

ಚಿತ್ರದಲ್ಲಿ ಭರತನಾಟ್ಯಂಗೆ ಮಹತ್ವ ನೀಡಿದಂತೆ ತುಂಬ ಸುಂದರವಾದ ಪ್ರೀತಿಯ ಕಥೆಯೂ ಇದೆಯಂತೆ. ನಾಯಕ ನಟರಾಗಿರುವ ವಿಶಾಲ್ ಚಿತ್ರದಲ್ಲಿ ಸಿಕ್ಕಾಪಟ್ಟೆ ಜೋಕ್ ಮಾಡುತ್ತಾರಂತೆ. ಚಿತ್ರ್ಕಕೆ ಸಂಗೀತವನ್ನು ಗಂಧರ್ವ ಅವರು ನೀಡಿದರೆ, ನಿರ್ದೇಶಕರಾಗಿ ಬಂಗಾರು ದುಡಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಿಕಾ, ಕಾಲ್ಗೆಜ್ಜೆ, ಚೆಲುವಿನ ಚಿಲಿಪಿಲಿ