ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಟ್ಟರ 'ಪಂಚರಂಗಿ': ನಿಧಿ ಸುಬ್ಬಯ್ಯರ ಕಾಲು ನೆಲದಲ್ಲಿಲ್ಲ! (Pancharangi | Nidhi Subbayya | Yogaraj Bhat | Diganth)
ಸುದ್ದಿ/ಗಾಸಿಪ್
Bookmark and Share Feedback Print
 
Nidhi Subbayya
MOKSHA
ಯೋಗರಾಜ ಭಟ್ಟರ ಪಂಚರಂಗಿ ಚಿತ್ರದ ಚಿತ್ರೀಕರಣ ಮಂಗಳೂರು ಸುತ್ತಮುತ್ತ ಭರದಿಂದ ಸಾಗಿದೆ. ಮೊದಲ ಬಾರಿಗೆ ಭಟ್ಟರ ತಂಡಕ್ಕೆ ಸೇರಿರುವ ನಾಯಕಿ ನಟಿ ನಿಧಿ ಸುಬ್ಬಯ್ಯಗೆ ಮಾತ್ರ ಕಾಲು ನೆಲದಲ್ಲೇ ಇಲ್ಲ ಎನ್ನುವಷ್ಟು ಆಕಾಶದೆತ್ತರಕ್ಕೆ ನೆಗೆಯುವಷ್ಟು ಖುಷಿಯಾಗಿದೆಯಂತೆ. ಮಂಗಳೂರಿನಲ್ಲಿ ಕೊಂಚ ಸೆಖೆಯಿದ್ರೂ ಭರ್ಜರಿಯಾಗಿ ಭಟ್ಟರ ಸಿನಿಮಾದ ಶೂಟಿಂಗಿನಲ್ಲಿ ಎಂಜಾಯ್ ಮಾಡ್ತಿದ್ದಾರಂತೆ!

ಯೋಗರಾಜ ಭಟ್ಟರ ಸ್ವಂತ ನಿರ್ಮಾಣದಿಂದ ಹೊರಬರುತ್ತಿರುವ ಈ ಚಿತ್ರ ಇದೀಗ ಮಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸುತ್ತಿದೆ. ಪಡೀಲ್ ಬಳಿಯಲ್ಲಿ ಮನೆಯೊಂದರಲ್ಲಿ ಶೂಟಿಂಗ್ ಸದ್ಯ ನಡೆಯುತ್ತಿದೆ.

ನನಗೆ ಯೋಗರಾಜ್ ಭಟ್ ಅವರ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದೇ ದೊಡ್ಡ ಖುಷಿ. ನಾನು ಭಟ್ ಸರ್ ನಿರ್ದೇಶಿಸಿದ್ದ ಎಲ್ಲ ಚಿತ್ರಗಳನ್ನೂ ನೋಡಿದ್ದೆ. ಅವರ ಎಲ್ಲ ಚಿತ್ರಗಳೂ ಅದ್ಬುತವಾಗಿದೆ. ಅವರು ಚಿತ್ರಗಳಲ್ಲಿ ಸಂಗೀತಕ್ಕೆ ನೀಡುವ ಮಹತ್ವ ಹಾಗೂ ಅವುಗಳನ್ನು ಅಂಥವರ ಚಿತ್ರದಲ್ಲಿ ನನಗೊಂದು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ಖಂಡಿತವಾಗಿಯೂ ಭಟ್ ಸರ್ ನನ್ನಿಂದ ಉತ್ತಮ ನಟನೆಯನ್ನು ಪಡೆಯಲು ಸಾಧ್ಯವಾಗುತ್ತಾರೆ ಎಂಬ ನಂಬಿಕೆ ನನಗಿದೆ. ಈವರೆಗೆ ನಡೆದ ಶೂಟಿಂಗ್ ಚೆನ್ನಾಗಿ ಬಂದಿದೆ ಎನ್ನುತ್ತಾರೆ ನಿಧಿ.

ಇನ್ನು ನಾಯಕ ನಟ ದಿಗಂತ್ ಅಂತೂ, ಮಂಗಳೂರಿನ ಬೀಚುಗಳಲ್ಲಿ ಬೈಕು ಓಡಿಸುತ್ತಾ ತನ್ನ ಉಳಿದ ಸಮಯಗಳಲ್ಲಿ ಮಜಾ ಮಾಡುತ್ತಿದ್ದಾರಂತೆ. ಮಂಗಳೂರು ಸ್ವರ್ಗದ ಹಾಗೆ ಇದೆ. ಇಲ್ಲಿರುವ ಬೀಚ್, ಸುತ್ತಾಡೋದಕ್ಕೆ ಬೈಕ್ ನನ್ನ ಇಚ್ಛೆಗಳೆಲ್ಲವನ್ನು ಪೂರೈಸಿವೆ ಎನ್ನುತ್ತಾರೆ ದಿಗಂತ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಂಚರಂಗಿ, ನಿಧಿ ಸುಬ್ಬಯ್ಯ, ಯೋಗರಾಜ್ ಭಟ್, ದಿಗಂತ್