ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುದೀಪ್, ಅಂಬರೀಷ್ ಜೊತೆಗೆ ನಾರಾಯಣ್ (Sudeep | Ambareesh | S Narayan | Kannada Cinema News | Kannada Film)
ಸುದ್ದಿ/ಗಾಸಿಪ್
Bookmark and Share Feedback Print
 
ಏನೇ ಮಾಡಿದರೂ ಗುಟ್ಟಾಗಿ ಮಾಡುವುದು ಎಸ್. ನಾರಾಯಣ್ ಗುಟ್ಟು. ಈ ಬಾರಿ ಚಿತ್ರ ಮಾಡುವುದಕ್ಕೂ ಮುನ್ನವೇ ಚಿತ್ರದ ಬಗ್ಗೆ ಗುಟ್ಟು ರಟ್ಟಾಗಿಸಿದ್ದಾರೆ.

ತಮ್ಮ ಹೊಸ ಚಿತ್ರಕ್ಕೆ ಈ ಬಾರಿ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಿದ್ದಾರೆ. ರಾಜ್‌ಕುಮಾರ್, ವಿಷ್ಣುವರ್ಧನ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ಹಲವು ನಾಯಕರ ಚಿತ್ರಗಳನ್ನು ನಿರ್ದೇಶಿಸಿರುವ ನಾರಾಯಣ್ ಈ ಬಾರಿಗೆ ಸುದೀಪ್‌ಗೆ ಮಣೆ ಹಾಕಿದ್ದಾರೆ. ಅಷ್ಟೆ ಅಲ್ಲ, ರೆಬೆಲ್ ಸ್ಟಾರ್ ಅಂಬರೀಷ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ.

ಚಿತ್ರದ ಪಾತ್ರದ ಬಗ್ಗೆ ನಾರಾಯಣ್ ವಿವರಿಸಿದಾಗ ಅಂಬರೀಷ್ ಖುಷಿಯಿಂದ ಒಪ್ಪಿಕೊಂಡರಂತೆ. ಬಹು ನಿರೀಕ್ಷೆಯಲ್ಲಿರುವ ಈ ಚಿತ್ರ ಏಪ್ರಿಲ್‌ನಲ್ಲಿ ಸೆಟ್ಟೇರಲಿದೆ. ಈ ಚಿತ್ರದ ನಾಯಕಿಯ ಹುಡುಕಾಟದಲ್ಲಿದ್ದಾರೆ ನಿರ್ದೇಶಕರು. ಈಗಾಗಲೇ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 3 ಸಾವಿರ ಫೋಟೋಗಳು ಬಂದಿವೆ. ಆದರೆ ನಾಯಕಿ ಯಾರೆಂಬುದು ಇನ್ನೂ ಅಂತಿಮವಾಗಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುದೀಪ್, ಅಂಬರೀಷ್, ಎಸ್ ನಾರಾಯಣ್, ಕನ್ನಡ ಚಿತ್ರ ಸುದ್ದಿ, ಕನ್ನಡ ಸಿನಿಮಾ