ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪುನೀತ್, ಭಾವನಾ ಕನಸಿನ ಜಾಕಿ (Puneeth | Bhavana | Jackie | Soori | Vajreshwari Combines)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇದು ಒಬ್ಬರ ಕನಸಲ್ಲ. ಹಲವರ ಕನಸು ಜೊತೆಗೂಡಿ ಬರುತ್ತಿರುವ ಚಿತ್ರ ಜಾಕಿ. ಇದೇನಪ್ಪಾ ಎಂದು ಹುಬ್ಬೇರಿಸಬೇಡಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸೂರಿ ನಿರ್ದೇಶನದಲ್ಲಿ ಜಾಕಿ ಚಿತ್ರ ಸೆಟ್ಟೇರಿದೆ.

ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಶ್ರೀ ವಜ್ರೇಶ್ವರಿ ಕಂಬೈನ್ಸ್. ಇದರ ಅಡಿಯಲ್ಲಿ ನಿರ್ದೇಶನ ಮಾಡುವುದು ಕನ್ನಡ ಚಿತ್ರರಂಗದ ಹಲವು ನಿರ್ದೇಶಕರ ಕನಸು. ಇದಕ್ಕೆ ಸೂರಿ ಹೊರತಾಗಿರಲಿಲ್ಲ. ಅಷ್ಟೇ ಅಲ್ಲ, ದುನಿಯಾ, ಇಂತಿ ನಿನ್ನ ಪ್ರೀತಿಯ ಚಿತ್ರಗಳನ್ನು ನೋಡಿದ ಬಳಿಕ ಸೂರಿ ಜೊತೆಗೊಂದು ಚಿತ್ರ ಮಾಡಬೇಕೆಂದು ಪುನೀತ್ ಅಂದುಕೊಂಡಿದ್ದರಂತೆ. ಪೃಥ್ವಿ ಚಿತ್ರದ ನಂತರ ಆ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ ಪವರ್ ಸ್ಟಾರ್.

ತಮಿಳು, ತೆಲುಗು, ಮಲಯಾಳಂಗಳ ಬಳಿಕ ಈಗ ನಟಿ ಭಾವನಾ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ವೆಯಿಲ್, ಚಿತರಂ ಪೇಸುದಡಿ ಚಿತ್ರಗಳ ನಂತರ ಅವರ ಚಿತ್ರ ಇದಾಗಿದೆ. ಅದೇನೇ ಇರಲಿ. ಎಲ್ಲರ ಕನಸು ನನಸಾಗುವ ಕಾಲ ಬಂದಿದೆ. ಚಿತ್ರದ ಮುಂದಿನ ಬೆಳವಣಿಗೆಗಳ ಕುರಿತು ಕಾಯಬೇಕಷ್ಟೇ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪುನೀತ್, ಭಾವನಾ, ಜಾಕಿ, ಸೂರಿ, ವಜ್ರೇಶ್ವರಿ ಕಂಬೈನ್ಸ್, ಕನ್ನಡ ಸಿನಿಮಾ