ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಚಕ್ರವ್ಯೂಹ'ದಲ್ಲಿ ರೇಣುಕಾಚಾರ್ಯ ಹಾಗೂ ನರ್ಸ್ ಜಯಲಕ್ಷ್ಮಿ! (Chakravyuha | Renukacharya | Nurse Jayalakshmi | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
Jayalakshmi
NRB
ಸಚಿವ ರೇಣುಕಾಚಾರ್ಯ ಹಾಗೂ ನರ್ಸ್ ಜಯಲಕ್ಷ್ಮಿ ಅವರ ಪ್ರಹಸನ ತಿಳಿಯವರಿಲ್ಲ. ಇದೀಗ ಅದನ್ನು ಇನ್ನೂ ಹೆಚ್ಚು ಪ್ರಚುರ ಪಡಿಸಲೋ ಎಂಬಂತೆ, ಸಿನಿಮಾ ಮೂಲಕ ಹೊರಬರಲಿದೆ. ನರ್ಸ್ ಜಯಲಕ್ಷ್ಮಿ ಅವರ ಜೀವನದ ಘಟನೆ ಕುರಿತು ಚಿತ್ರವೊಂದು ನಿರ್ಮಾಣವಾಗಲಿದೆ ಎಂಬ ಪುಕಾರು ಈಗ ಹಬ್ಬಿದೆ.

ವಿಶೇಷವೆಂದರೆ ಈ ಚಿತ್ರಕ್ಕೆ ಚಕ್ರವ್ಯೂಹ ಎಂದು ಹೆಸರಿಟ್ಟಿದ್ದು ಇದನ್ನು ಸುಗ್ರೀವನಿಗೇ ಸಡ್ಡುಹೊಡೆದು 16 ಗಂಟೆಗಳ ದಾಖಲೆ ಸಮಯದಲ್ಲಿ ಚಿತ್ರೀಕರಿಸಲಾಗುತ್ತದಂತೆ. ಮಾರ್ಚ್ 16ರ ಯುಗಾದಿ ಹಬ್ಬದ ದಿನ ಈ ಚಿತ್ರದ ಅಡಿಯೋ ಕ್ಯಾಸೆಟ್‌ಗಳೂ ಸಹ ಬಿಡುಗಡೆಯಾಗಲಿದ್ದು, ಏಪ್ರಿಲ್ ತಿಂಗಳಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಟಿ.ಕೆ.ಜಯರಾಮ್ ತಿಳಿಸಿದ್ದಾರೆ.

ಆದರೆ ಇನ್ನೂ ವಿಶೇಷವೆಂದರೆ, ಚಿತ್ರದ ನಾಯಕ ನಾಯಕಿಯರ ಬಗ್ಗೆ ಇನ್ನೂ ಯಾವ ವಿವರವೂ ಪ್ರಕಟವಾಗಿಲ್ಲ. ಅದು ಈಗ ತುಂಬಾ ಸಸ್ಪೆನ್ಸ್ ಅಂತೆ. ಚಿತ್ರದ ನಾಯಕಿಯಾಗಿ ಟಿವಿ ವರದಿಗಾರ್ತಿಯೊಬ್ಬರು ನಟಿಸಲಿದ್ದಾರೆ ಎಂಬ ಮಾತೂ ಕೇಳಿಬಂದಿದೆ. ಖ್ಯಾತ ನಟರಿಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರೆಂಬ ಮಾಹಿತಿಯೂ ಇದೆ. ಹೆಚ್ಚಿನ ವಿವರಕ್ಕೆ ಇನ್ನೂ ಕಾಯಬೇಕು ಬಿಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಕ್ರವ್ಯೂಹ, ರೇಣುಕಾಚಾರ್ಯ, ನರ್ಸ್ ಜಯಲಕ್ಷ್ಮಿ, ಕನ್ನಡ ಸಿನಿಮಾ