ಅಂತೂ ಕನ್ನಡದ ಪೃಥ್ವಿಗೆ ಹಾಡಿದ ಕಮಲ್ ಪುತ್ರಿ ಶ್ರುತಿ ಹಾಸನ್!
IFM
ಅಂತೂ ಶ್ರುತಿ ಕಮಲಹಾಸನ್ ಕನ್ನಡ ಚಿತ್ರಕ್ಕಾಗಿ ಹಾಡುವುದು ಪಕ್ಕಾ ಆಗಿದೆ. ಹಲವು ದಿನಗಳಿಂದ ಪುನೀತ್ ಅಭಿನಯದ ಪೃಥ್ವಿ ಚಿತ್ರದಲ್ಲಿ ಕೆ. ಕಲ್ಯಾಣ್ ಬರೆದಿರುವ 'ನೆನಪಿದು ನೆನಪಿದು ಕನಸಲು ಮರೆಯದೆ ನೆನಪಿದು...' ಹಾಡನ್ನು ಶ್ರುತಿ ಹಾಡಲಿದ್ದಾರೆ.
ಅದಕ್ಕೆ ದಿನಾಂಕ ಕೂಡ ನಿಗದಿಯಾಗಿದೆ. ಇದೇ 8ರಂದು ಶ್ರುತಿ ಈ ಸ್ವರಕ್ಕೆ ಧ್ವನಿಗೂಡಿಸಲಿದ್ದಾರಂತೆ. ಈಗಾಗಲೇ ಈ ಹಾಡಿನ ಹಾಡಿನ ಸ್ವರ ಸಿಡಿ ಅವರ ಕೈ ಸೇರಿದೆ ಎಂದು ವಿವರಿಸಿದ್ದಾರೆ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ.
ಈ ಹಾಡಿನ ಮೂಲಕ ಶ್ರುತಿ ಮೊದಲ ಬಾರಿಗೆ ಕನ್ನಡದಲ್ಲಿ ಹಾಡುತ್ತಿರುವ ಗೀತೆಯಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ತಮ್ಮ ನಿವಾಸವನ್ನು ಬದಲಾಯಿಸುವ ನಿಟ್ಟಿನಲ್ಲಿ ಬಿಜಿಯಾಗಿದ್ದ ಶ್ರುತಿ ಈಗ ಹಾಡಿಗೆ ಸಜ್ಜಾಗಿದ್ದಾರೆ. ಇವರಿಗೆ ಜೊತೆಯಾಗಿ ಕಾರ್ತಿಕ್ ಹಾಡುತ್ತಿದ್ದಾರೆ. ಇದೊಂದು ಪಕ್ಕಾ ಪ್ರೇಮಗೀತೆ. ಶ್ರುತಿ ಹಾಡುವ ಮೊದಲೇ ಚಿತ್ರತಂಡ ಈ ಹಾಡಿನ ಚಿತ್ರೀಕರಣ ಮುಗಿಸಿದೆ. ಅಂತೂ ಶ್ರುತಿಯನ್ನು ಒಪ್ಪಿಸುವಲ್ಲಿ ಪೃಥ್ವಿ ತಂಡ ಯಶಸ್ವಿಯಾಗಿದೆ.