ಇದು ಇತ್ತೀಚೆಗಷ್ಟೇ ತನ್ನ ರಾಸಲೀಲೆಯಿಂದ ರಾಜ್ಯದ ಮೂಲೆ ಮೂಲೆಯಲ್ಲಿಯೂ ಹೆಸರು ಪಡೆದ ನಿತ್ಯಾನಂದ ಸ್ವಾಮೀಜಿಯ ಕಥೆ. ನಿತ್ಯಾನಂದರ ಆಶ್ರಮಕ್ಕೆ ಹೋದ ಕೆಲವು ಚಿತ್ರರಂಗದ ಗಣ್ಯರು ಆ ಆಶ್ರಮದ ಬಗ್ಗೆ ಕೊಂಚ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಮಠ ಚಿತ್ರದ ಖ್ಯಾತಿಯ ಗುರುಪ್ರಸಾದ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದರು. ಅವರು ಖಂಡಿತಾ ಈ ಸ್ವಾಮೀಜಿಯ ಹಿಂದೆ ಒಂದು ಬಣ್ಣದ ಕಥೆಯಿದೆ ಎಂದು ಮೊದಲೇ ಅಂದುಕೊಂಡಿದ್ದರಂತೆ!
ಹೌದು. ಮಠ ಚಿತ್ರದ ಮೂಲಕ ಸ್ವಾಮೀಜಿಗಳ ಅಸ್ತಿತ್ವಕ್ಕೇ ಪ್ರಶ್ನೆ ಹಾಕಿದ್ದ ನಿರ್ದೇಶಕರೆಂದರೆ ಅದು ಗುರುಪ್ರಸಾದ್. ಈ ಚಿತ್ರ ಬಿಡುಗಡೆಯಾದ ಮೇಲೆ ರಾಜ್ಯಾದ್ಯಂತ ಹೆಸರು ಮಾಡಿದ್ದು ಗೊತ್ತೇ ಇದೆ. ಇವರು ಮಠ ಚಿತ್ರ ತಯಾರಿಸುವುದ್ಕಕಿಂತ ಮೊದಲು ಈ ಚಿತ್ರಕ್ಕಾಗಿ ಹಲವು ಮಠಾಧೀಶರ ಭೇಟಿ ನಡೆಸಿದ್ದರು. ಹಾಗೆ ಎಲ್ಲಾ ಮಠಗಳಿಗೆ ಭೇಟಿಯಾದಂತೆ ನಿತ್ಯಾನಂದ ಸ್ವಾಮಿಗಳ ಮಠಕ್ಕೂ ಭೇಟಿ ಇಟ್ಟಿದ್ದರಂತೆ. ಆಗ ಅಲ್ಲಿನ ಕೆಲ ಸೂಕ್ಷ್ಮ ವಿಷಯಗಳನ್ನು ಗಹನವಾಗಿ ಗಮನಿಸಿದ ಗುರುಪ್ರಸಾದ್, ಇಲ್ಲಿ ಖಂಡಿತ ಏನೋ ಒಂದು ಒಳಗುಟ್ಟು ಅಡಗಿದೆ ಎಂದು ಅಂದುಕೊಂಡಿದ್ದರಂತೆ.
ಈ ಬಗ್ಗೆ ಅವರ ಆಪ್ತ ಸಲಹೆಗಾರರಾದ ತಬಲಾ ನಾಣಿ ಮತ್ತವರ ಗೆಳೆಯರ ಜೊತೆ, ಮುಂದೊಂದು ಇದೇ ಸ್ವಾಮೀಜಿ ಬಣ್ಣದ ಲೋಕ ಜನರ ಮುಂದೆ ಬರಲಿದೆ. ಅದಾಗದಿದ್ದಲ್ಲಿ ನಾನು ಗಡ್ಡಕ್ಕೆ ಸನ್ಯಾಸತ್ವ ಸ್ವೀಕರಿಸುವಂತೆ ಆಜ್ಞೆ ಮಾಡುತ್ತೇನೆ ಎಂದು ಹೇಳಿದ್ದರಂತೆ.
ಈಗ ಸ್ವಾಮೀಜಿಗಳ ಬಣ್ಣ ಬಯಲಾಗಿದೆ. ಗುರುಪ್ರಸಾದ್ ಹೇಳಿದ ಮಾತು ಸತ್ಯವಾಗಿದೆ. ಅಂತೂ ಗಡ್ಡ ತೆಗೆಯಲು ಇನ್ನು ಅಡ್ಡಿಯಿಲ್ಲ ಅನಿಸುತ್ತೆ!