ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವರ್ಡ್: ಇದು ಅಮೆರಿಕಾ ಕನ್ನಡಿಗರ ಚಿತ್ರ (Word | Anup Bhandari | America Kannada)
ಸುದ್ದಿ/ಗಾಸಿಪ್
Bookmark and Share Feedback Print
 
ಕಿವಿ ಕೇಳಿಸದ ಮತ್ತು ಮಾತನಾಡಲು ಬಾರದ ವ್ಯಕ್ತಿ ಜೀವನ ಕುರಿತಾದ ಚಿತ್ರದ ಹೆಸರೇ 'ವರ್ಡ್'. ಮೂಲತಃ ಇದು ಅಮೆರಿಕಾ ಕನ್ನಡಿಗರ ಸಣ್ಣ ಸಿನಿಮಾ. ಅಮೆರಿಕಾದಲ್ಲಿರುವ ಅನೂಪ್ ಭಂಡಾರಿ ಇಷ್ಟಪಟ್ಟು ಈ ಚಿತ್ರ ಮುಗಿಸಿದ್ದಾರೆ.

ಮೊದಲಿನಿಂದಲೂ ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಎಂಬ ತುಡಿತವಿಟ್ಟುಕೊಂಡಿದ್ದ ಅನೂಪ್ ಕಡಿಮೆ ಅವಧಿಯ ಚಿತ್ರ ಮಾಡಿ ಸೈ ಅನಿಸಿಕೊಂಡಿದ್ದಾರೆ. ಈ ಚಿತ್ರ ಕೇವಲ ಇಪ್ಪತ್ತು ನಿಮಿಷದಲ್ಲೇ ಚಿತ್ರೀಕರಣಗೊಂಡಿರುವುದ ವಿಶೇಷ. ಇದರ ಚಿತ್ರೀಕರಣವನ್ನು ಬಹುತೇಕ ಅಮೇರಿಕಾದಲ್ಲೇ ಮುಗಿಸಿದ್ದಾರೆ.

ಸಮಾಜದಲ್ಲಿ ಕಿವಿ ಕೇಳಿಸದ ಹಾಗೂ ಮಾತು ಬಾರದ ವ್ಯಕ್ತಿಗಳ ಬಗ್ಗೆ ತಾತ್ಸಾರ ಮನೋಭಾವವಿದೆ. ಅವರಲ್ಲೂ ಸ್ವಾಭಿಮಾನ, ಛಲ ಇರುತ್ತದೆ ಎಂಬುದು ಈ ಚಿತ್ರದಲ್ಲಿ ಸೂಕ್ಷ್ಮವಾಗಿ ಬಿಂಬಿಸಲಾಗಿದೆ. ಚಿತ್ರದಲ್ಲಿ ಇರುವುದು ಇಬ್ಬರು. ನಾಯಕ ಮತ್ತು ನಾಯಕಿ. ಇವರಿಬ್ಬರ ನಡುವಿನ ಮುದ್ದಾದ ಸಂಭಾಷಣೆಯೇ ಚಿತ್ರದ ಹೈಲೆಟ್ ಎನ್ನುತ್ತಾರೆ ಅನೂಪ್ ಭಂಡಾರಿ.

ಮುಂದಿನ ದಿನಗಳಲ್ಲಿ ಕನ್ನಡದಲ್ಲೊಂದು ಪಕ್ಕಾ ಕಮರ್ಷಿಯಲ್ ಚಿತ್ರ ನಡೆಸಬೇಕೆಂಬ ಉದ್ದೇಶ ಹೊಂದಿದ್ದಾರೆ ಅನೂಪ್. ಈ ಮೂಲಕ ಕನ್ನಡದ ನಿರ್ದೇಶಕರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವರ್ಡ್, ಅನೂಪ್ ಭಂಡಾರಿ, ಅಮೆರಿಕ ಕನ್ನಡಿಗ