ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕುಮಾರ್ ಗೋವಿಂದರ 'ಸತ್ಯ' ಯಾವಾಗ ಹೊರಬಂದೀತು? (Sathya | Kumar Govind | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
ಕುಮಾರ ಗೋವಿಂದ ಅವರ 'ಸತ್ಯ' ಚಿತ್ರ ಬಿಡುಗಡೆಗೆ ಕಾದಿದೆ ಎಂದು ಹಲವು ದಿನಗಳಿಂದ ಕೇಳಿ ಬರುತ್ತಿರುವ ಮಾತು. ಆದರೆ ಇನ್ನೂ ತೆರೆಕಾಣುವ ಕಾಲ ಕೂಡಿ ಬಂದಿರಲಿಲ್ಲ. ಈ ಬಗ್ಗೆ ಕುಮಾರ್ ಗೋವಿಂದ್ ಅವರ ಬಳಿಯೇ ನೇರವಾಗಿ ವಿಚಾರಿಸಿದರೆ, ಚಿತ್ರ ತಡವಾಗಿರುವುದಕ್ಕೆ ಕಾರಣವೇನೆಂಬುದು ಚಿತ್ರ ನೋಡಿದಾಗ ತಿಳಿಯುತ್ತದೆ. ಚಿತ್ರವನ್ನು ತುಂಬಾ ಶ್ರೀಮಂತಿಕೆಯಿಂದ ಮಾಡಲಾಗಿದೆ ಎನ್ನುತ್ತಾರೆ!

ಅಷ್ಟೇ ಅಲ್ಲ, ಈ ಚಿತ್ರದ ಎಲ್ಲಾ ಜವಾಬ್ದಾರಿಯನ್ನೂ ನಾನೇ ವಹಿಸಿಕೊಂಡಿರುವುದರಿಂದ ಸ್ವಲ್ಪ ಭಯದ ಜೊತೆಗೆ ಖುಷಿಯೂ ಇದೆ. ಚಿತ್ರ ವಿಶೇಷವಾಗಿ, ಚೆನ್ನಾಗಿ ಮೂಡಿ ಬರಬೇಕೆಂಬ ನಿಟ್ಟಿನಲ್ಲಿ ಚಿತ್ರ ತಡವಾಗಿ ಬರುತ್ತಿದೆ ಎನ್ನುವುದು ಅವರ ಅಂಬೋಣ.

ಆದರೆ ಅವರು ಚಿತ್ರ ಕಥೆಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ಹೊಸ ಪ್ರಯೋಗವನ್ನು ಮಾಡಿದ್ದೇನೆ. ಚಿತ್ರದ ಕಥೆ ಬಗ್ಗೆ ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಬಹುತೇಕ ಹೊಸಬರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಒಟ್ಟಿನಲ್ಲಿ ಚಿತ್ರದಲ್ಲಿ ಥ್ರಿಲ್, ಸಸ್ಪೆನ್ಸ್ ಇದೆ ಎನ್ನುತ್ತಾರೆ ಅವರು. ಅಂದಹಾಗೆ ಈ ಚಿತ್ರ ಬಿಡುಗಡೆಗೂ ಮುನ್ನವೇ ತೆಲುಗಿಗೆ ರಿಮೇಕ್ ಆಗುತ್ತಿರುವುದು ವಿಶೇಷ. ಏನೇ ಆಗಲಿ, ಕುಮಾರ್ ಗೋವಿಂದರ ಎರಡನೇ ಇನ್ನಿಂಗ್ಸ್‌ಗೆ ಶುಭ ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸತ್ಯ, ಕುಮಾರ್ ಗೋವಿಂದ್, ಕನ್ನಡ ಸಿನಿಮಾ