ಸ್ಕೂಲ್ ಮಾಸ್ಟರ್, ಎರಡನೇ ಹೆಂಡ್ತಿ ಚಿತ್ರದ ಬಳಿಕ ಸುಹಾಸಿನಿ ಮತ್ತೆ ನಗೆ ಸೂಸುತ್ತಾ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ರವಿ ಶ್ರೀವತ್ಸ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಡೆಡ್ಲಿ- 2 ಚಿತ್ರದಲ್ಲಿ ನಟಿಸುವ ನಿಮಿತ್ತ ಮತ್ತೆ ಬಂದಿದ್ದಾರೆ.
ಅವರು ಇತ್ತೀಚೆಗೆ ಚಿತ್ರದ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಒಟ್ಟು ಆರು ದಿನಗಳ ಕ್ಲೈಮಾಕ್ಸ್ ಚಿತ್ರೀಕರಣದಲ್ಲಿ ಇವರೊಂದಿಗೆ ದೇವರಾಜ್, ರವಿ ಕಾಳೆ ಭಾಗವಹಿಸಿದ್ದರು. ನಾಯಕ ನಟ ಆದಿತ್ಯ ಆಕ್ಸಿಡೆಂಟ್‌ನಿಂದ ಸುಧಾರಿಸಿಕೊಳ್ಳುತ್ತಿದ್ದು, ವಿಶ್ರಾಂತಿ ಪಡೆದು ಬಂದ ಬಳಿಕ ಹಾಡುಗಳ ಹಾಗೂ ಕೆಲವು ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗುವುದೆಂದು ನಿರ್ದೇಶಕ ಶ್ರೀವತ್ಸ ಹೇಳಿದ್ದಾರೆ.
ಈ ಚಿತ್ರ ಡೆಡ್ಲಿ ಸೋಮ ಸತ್ತ ನಂತರದ ಕಥೆ ಇಲ್ಲಿ ಮುಂದುವರೆಯುತ್ತದೆ. ಆ ಚಿತ್ರದ ಒಂದು ಸಣ್ಣ ಎಳೆಯನ್ನಿಟ್ಟುಕೊಂಡು ಚಿತ್ರಕತೆ ರಚಿಸಿದ್ದಾರಂತೆ ರವಿ ಶ್ರೀವತ್ಸ.