ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆತ್ಮಹತ್ಯೆಗೆ ಯತ್ನಿಸಿದ್ದು ತಪ್ಪಾಯ್ತು, ಕ್ಷಮಿಸಿ: ಸಾಯಿಪ್ರಕಾಶ್ (Saiprakash | Shivarajkumar | Devaru Kotta Thangi | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇತ್ತೀಚೆಗಷ್ಟೆ ಆತ್ಮಹತ್ಯೆಗೆ ಯತ್ನಿಸಿ ಸಾವಿನ ಮನೆಯ ಕದ ತಟ್ಟಿ ಮರಳಿ ಬಂದ ನಿರ್ದೇಶಕ, ನಿರ್ಮಾಪಕ ಸಾಯಿಪ್ರಕಾಶ್ ಇದೀಗ ತಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟಿದ್ದಾರೆ. ಆತ್ಮಹತ್ಯೆಯ ಪ್ರಯತ್ನದ ನಂತರ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾಯಿಪ್ರಕಾಶ್, ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಮುಂದೆ ಜೀವನದಲ್ಲಿ ಉತ್ತಮ ಘಟನೆಗಳು ನಡೆಯಬಹುದೆಂದು ಪಾಸಿಟಿವ್ ಆಗಿ ಯೋಚಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ಆತ್ಮಹತ್ಯೆ ನಿರ್ಧಾರವನ್ನು ದುಡುಕಿ ತೆಗೆದುಕೊಂಡೆ ಎಂದು ನನಗೆ ಅರಿವಾಗಿದೆ. ಮಾಡಿದ ತಪ್ಪಿಗೆ ದೇವರು ನನ್ನನ್ನು ಮತ್ತೆ ಬದುಕಲು ಬಿಟ್ಟು ಕ್ಷಮೆ ನೀಡಿದ್ದಾನೆ. ಇನ್ನೊಮ್ಮೆ ಆ ತಪ್ಪು ಮಾಡುವುದಿಲ್ಲ ಎಂದು ಸಾಯಿ ಪ್ರಕಾಶ್ ನುಡಿದರು.

ಸುದೀಪ್, ದರ್ಶನ್ ಕಾಲ್‌ಶೀಟ್: ಇದೀಗ ಸಾಯಿ ಪ್ರಕಾಶ್ ಅವರಿಗೆ ಸುದೀಪ್ ಅವರ ಕಾಲ್‌ಶೀಟ್ ದೊರೆತಿದೆ. ಇದೇ ನವೆಂಬರ್ ತಿಂಗಳಲ್ಲಿ ಸುದೀಪ್ ಅವರ ಕಾಲ್‌ಶೀಟ್ ದಕ್ಕಿದೆ. 2011ರ ಫೆಬ್ರವರಿಗೆ ದರ್ಶನ್ ಅವರ ಕಾಲ್‌ಶೀಟ್ ಇದೆ. ಸಿಂಹಾದ್ರಿಯ ಸಿಂಹ ಚಿತ್ರದ ನಿರ್ಮಾಪಕರಾಗಿದ್ದ ವಿಜಯಕುಮಾರ್, ಪ್ರಕಾಶ್ ಹಾಗೂ ಪ್ರಶಾಂತ್ ನನ್ನ ಚಿತ್ರ ನಿರ್ಮಿಸಲು ಮುಂದೆ ಬಂದಿದ್ದಾರೆ ಎಂದು ಸಾಯಿ ನುಡಿದರು.

ದೇವರು ಕೊಟ್ಟ ತಂಗಿಗಾಗಿ 5.25 ಕೋಟಿ ರೂಪಾಯಿಗಳ ಹೂಡಿಕೆ ಮಾಡಿದ್ದು, ಇದರ ಸಾಲದ ಹಣ ತೀರಿಕೆಗಾಗಿ ಅಬ್ಬೆಗೆರೆಯ ನಿವಾಸ, ಅಬ್ಬೆಗೆರೆಯ ಮೂರು ಸೈಟ್‌ಗಳು ಹಾಗೂ ಹೊಸೂರಿನಲ್ಲಿರುವ ನಾಲ್ಕು ಸೈಟುಗಳನ್ನು ಮಾರಾಟ ಮಾಡಿದರೂ, ಸಾಲ ತೀರಿಲ್ಲ. ಒಂದು ಕೋಟಿ ನಷ್ಟಕ್ಕಾಗಿ ನಾನು ತಿಂಗಳಿಗೆ 2.5 ಕೋಟಿ ರೂಪಾಯಿಗಳ ಬಡ್ಡಿ ಕಟ್ಟುತ್ತಿದ್ದೇನೆ ಎಂದು ಸಾಯಿ ಪ್ರಕಾಶ್ ತಿಳಿಸಿದರು.
Devaru Kotta Thangi
PR


ಶಿವಣ್ಣರನ್ನು ದೂರಬೇಡಿ: ನಾನು ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ಪ್ರಮುಖ ಕಾರಣ ದೇವರು ಕೊಟ್ಟ ತಂಗಿ ಚಿತ್ರದ ಸೋಲೇ ಹೊರತು ಬೇರಾರು ಅಲ್ಲ. ಆದರೂ ಇನ್ನೂ ಆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಯಾರೂ ಯಾರ ಮೇಲೂ ಅನುಮಾನ ಪಡುವುದು ಬೇಡ ಎಂದು ಸಾಯಿ ಸ್ಪಷ್ಟಪಡಿಸಿದರು.

ಪತ್ರಿಕೆಯೊಂದು ಇತ್ತೀಚೆಗೆ ಶಿವಣ್ಣ ನನಗೆ ಸಹಾಯ ಮಾಡಬೇಕು ಎಂಬರ್ಥದ ಲೇಖನ ಬರೆದಿತ್ತು. ಈ ವರದಿ ಓದಿ ನನಗೆ ಅತೀವ ಬೇಸರದ ಜೊತೆಗೆ ಘಾಸಿಯೂ ಆಗಿದೆ. ಈ ವರದಿ ಶಿವಣ್ಣರನ್ನು ವಿಪರೀತ ಬೇಸರಕ್ಕೆ ಎಡೆಮಾಡಿತ್ತು. ಆದರೆ, ಶಿವಣ್ಣ ಅವರು ನನಗೆ ಈವರೆಗೆ ಹಲವಾರು ಸಹಾಯ ಮಾಡಿದ್ದಾರೆ. ಜನರು ಶಿವಣ್ಣ ಅವರನ್ನು ತಪ್ಪು ತಿಳಿದಿದ್ದಾರೆ. ಈ ಕುರಿತು ನಾನೀಗಾಗಲೇ ಶಿವಣ್ಣ ಜೊತೆ ಮಾತುಕತೆ ನಡೆಸಿದ್ದೇನೆ. ಶಿವಣ್ಣ ಅವರ ಸಹೃದಯತೆ ಬಗ್ಗೆ ಎಷ್ಟು ಹೇಳಿದರೂ ಸಾಲದು. ಆದರೆ ಸಿನಿಮಾ ಸೋಲು ಅನುಭವಿಸಿದ್ದಕ್ಕೆ ಯಾರೇನೂ ಮಾಡೋದಕ್ಕಾಗದು ಎಂದು ವಿವರಿಸಿದರು.

ಶಿವಣ್ಣ ಅವರ ಬಗ್ಗೆ ಅನೇಕರಿಗೆ ತಪ್ಪು ತಿಳುವಳಿಕೆಯಿದೆ. ಆದರೆ ಶಿವಣ್ಣ ಅವರ ವಿರುದ್ಧ ನಾನು ಯಾವ ಪತ್ರಿಕೆಗೂ ಸಂದರ್ಶನ ನೀಡಿಲ್ಲ. ಯಾರ ಮೇಲೂ ಗೂಬೆ ಕೂರಿಸಿಲ್ಲ. ಆದರೆ ಪತ್ರಿಕೆ ಹಾಗೆ ಬರೆದದ್ದನ್ನು ಓದಿದ ಶಾಕ್ ನನ್ನಿಂದ ಇನ್ನೂ ಹೊಗಿಲ್ಲ ಎಂದು ಅವರು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಾಯಿಪ್ರಕಾಶ್, ಶಿವರಾಜ್ ಕುಮಾರ್, ದೇವರು ಕೊಟ್ಟ ತಂಗಿ, ಕನ್ನಡ ಸಿನಿಮಾ