ಚಲನಚಿತ್ರದ ಸಹ ನಿರ್ಮಾಪಕರ ಹಾಗೂ ಸಹಾಯಕ ನಿರ್ದೇಶಕರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಸಹ ಸಹಾಯಕರ ಸಂಘ ತಲೆಯೆತ್ತಿದೆ. ಇದರ ಉದ್ಘಾಟನೆಯನ್ನು ಸಚಿವ ಬಿ.ಎನ್.ಬಚ್ಚೆಬೌಡ ಇದೇ ಮಾ.14ರಂದು ರಾಜಾಜಿನಗರದಲ್ಲಿರುವ ಡಾ. ರಾಜ್‌ಕುಮಾರ್ ಕಲಾಕ್ಷೇತ್ರದಲ್ಲಿ ನಡೆಸಲಿದ್ದಾರೆ.
ಸುಮಾರು 10ರಿಂದ 12 ಚಿತ್ರಗಳಿಗೆ ಕೆಲಸ ಮಾಡಿದಾಗ ಮಾತ್ರವೇ ನಿರ್ದೇಶನದ ಅನುಭವವಾಗುತ್ತದೆ. ಆದರೆ ಮೂರು ತಿಂಗಳು ತರಬೇತಿ ಪಡೆದವರಿಗೆ ಗುರುತಿನ ಚೀಟಿಯನ್ನು ನೀಡುವುದು ಸರಿಯಲ್ಲ ಎಂದು ಈ ಸಂಘದ ಅಧ್ಯಕ್ಷ ಕೆ.ಬಿ.ಹಿರೇಮಠ ಅಭಿಪ್ರಾಯ.
ಈಗಾಗಲೇ ಈ ಬಗ್ಗೆ ಕಾರ್ಯಗಳು ಪ್ರಗತಿಯಲ್ಲಿದ್ದು, ಸಂಘದಲ್ಲಿ 120 ಜನರಿಗೆ ಸದಸ್ಯತ್ವವನ್ನು ನೀಡಲಾಗಿದೆ. ಇನ್ನು ಉಳಿದ ಅರ್ಜಿಗಳನ್ನು ಪರಿಶೀಲಿಸಲಾಗುವುದು. ಸರಿಯಾದ ಸಂಭಾವನೆ ಪಡೆಯುವಂತೆ ಉಳಿದವರಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ಹಿರೇಮಠ ತಿಳಿಸಿದ್ದಾರೆ. ಇದರಿಂದಾದರೂ ನಿರ್ಮಾಪಕರ ಮತ್ತು ನಿರ್ದೇಶಕರ ಸಮಸ್ಯೆ ಬಗೆಹರಿಯುವುದೇ ಕಾದು ನೋಡಬೇಕು.