ಮೆಂಟಲ್ ಮಂಜ ಚಿತ್ರದ ಮೂಲಕ ಗಾಂಧಿನಗರಕ್ಕೆ ಪರಿಚಿತರಾದ ಅರ್ಜುನ್ ಮೂರನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ ನಂತರ ಇದೀಗ ಹೊಸಚಿತ್ರ 'ಜರ್ನಿ'ಯಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಬೆಳ್ಳಿ ಮೊಡದ ಅಂಬರ ಎನ್ನುವ ಹೊಸ ಚಿತ್ರದ ನಿರ್ದೇಶಕ ಸಂಜಯ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಶಾಂತಿ ಪ್ರಿಯಾ ಎನ್ನುವ ಹೊಸ ಹುಡುಗಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರದಲ್ಲಿ ದಿ. ಕಲ್ಯಾಣ್ ಕುಮಾರ್ ಅವರ ಪುತ್ರ ಭರತ್ ಕಲ್ಯಾಣ್ ದ್ವಿತೀಯ ನಾಯಕನಾಗಿ ಅಭಿನಯಿಸಲಿದ್ದಾರೆ. ನಿರ್ದೇಶಕರು ಹೇಳುವಂತೆ, ಚಿತ್ರವು ಆರಂಭದಿಂದ ಕೊನೆಯವರೆಗೂ ಕುತೂಹಲವನ್ನು ಪ್ರೇಕ್ಷಕರಲ್ಲಿ ಮೂಡಿಸುತ್ತದೆ. ತಮ್ಮ ಹಿಂದಿನ ಚಿತ್ರಕ್ಕಿಂತ ಈ ಚಿತ್ರವು ವಿಭಿನ್ನತೆಯಿಂದ ಕೂಡಿದ್ದು, ಹಾಡುಗಳ ಚಿತ್ರೀಕರಣವು ಮುಗಿದಿದೆ ಎಂದಿದ್ದಾರೆ.
ತಿಂಡ್ಲು ಮುನಿರಾಜು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಸಂಜೀವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಹಣದ ಕಾರ್ಯವನ್ನು ಬಾಬು ನಿರ್ವಹಿಸಿದ್ದಾರೆ. ಮೆಂಟಲ್ ಮಂಜ ಹಾಗೂ ಕಲ್ಯಾಣ್ ಕುಮಾರ್ ಪುತ್ರದ ಹೊಸ ಜರ್ನಿ ಮುಂದೆಯೂ ಮುಂದುವರಿಯುತ್ತಾ... ಕಾದು ನೋಡಬೇಕು!