ಮಾಲಾಶ್ರೀ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಕನ್ನಡದ ಕಿರಣ್ ಬೇಡಿ ನಂತರ ಇದೀಗ ಮತ್ತೊಂದು ಅದ್ದೂರಿ ಚಿತ್ರ ಮೂಡಿಬರಲಿದೆ. ಅದುವೇ ವೀರ ಚಿತ್ರ. ಈಗಾಗಲೇ 50 ದಿನಗಳ ಚಿತ್ರೀಕರಣವನ್ನು ಮುಗಿಸಿದ್ದು, ಇನ್ನು 50 ದಿನಗಳ ಚಿತ್ರೀಕರಣವು ಬಾಕಿ ಉಳಿದಿದೆ.
ಹೈದರಾಬಾದ್ನಲ್ಲಿ ಚಿತ್ರಕ್ಕೆ ಅದ್ದೂರಿ ಸೆಟ್ಗಳನ್ನು ಸಿರ್ಮಿಸಿದ್ದು ಅದಕ್ಕಾಗಿ ರಾಮು ಲೆಕ್ಕವಿಲ್ಲದಷ್ಟು ಹಣವನ್ನು ಖರ್ಚುಮಾಡುತ್ತಿದ್ದಾರೆ. ಕನ್ನಡದ ಕಿರಣ್ ಬೇಡಿಯ ಅದ್ಬುತ ಯಶಸ್ವಿ ನಂತರ ಮಾಲಾಶ್ರೀಗಾಗಿ ಮತ್ತೊಂದು ಚಿತ್ರವನ್ನು ನಿರ್ಮಿಸುತ್ತಿದ್ದು, ಜೊತೆಯಲ್ಲೇ ಚಿರಂಜೀವಿ ಸರ್ಜಾ, ರಾಗಿಣಿ ಅಭಿನಯದ ಗಂಡೆದೆ ಚಿತ್ರವನ್ನು ರಾಮುರವರೇ ನಿರ್ಮಿಸುತ್ತಿದ್ದು ಚಿತ್ರೀಕರಣವು ಕೊನೆಯ ಹಂತ ತಲುಪಿದ್ದು ಶೀಘ್ರದಲ್ಲೇ ತೆರೆಯ ಮೇಲೆ ಅಬ್ಬರಿಸಲಿವೆ.
ಒಟ್ಟಿನಲ್ಲಿ ಗಂಡೆದೆ ಹಾಗೂ ವೀರ ಚಿತ್ರಗಳೆರಡೂ ಸದ್ಯದಲ್ಲೇ ಹೊರಬರುತ್ತಿರುವುದು ಸಾಹಸ ಸಿನಿಮಾಗಳ ಪ್ರಿಯರಿಗಂತೂ ಸಂತಸದ ಸುದ್ದಿಯೇ ಸರಿ. ರಾಮು ಅವರು ಎಷ್ಟು ದುಡ್ಡು ಸುರಿದಾದರೂ, ತಮ್ಮ ಅಭಿಮಾನಿಗಳಿಗೆ ಬೇಕಾದ ಎಲ್ಲ ಅಂಶಗಳನ್ನು ಸೇರಿಸಿ ಅದ್ದೂರಿ ಚಿತ್ರಗಳನ್ನು ನಿರ್ಮಿಸಿಕೊಡುವುದರಲ್ಲಿ ಅವರು ಎಂದಿಗೂ ಕೋಟಿ ನಿರ್ಮಾಪಕರೇ ಎಂಬುದು ಗಾಂಧಿ ನಗರದ ಸುದ್ದಿ.