ಶರ್ಮಿಳಾ ಮಾಂಡ್ರೆ, ಶ್ರೀನಗರ ಕಿಟ್ಟಿ ಮತ್ತು ದಿಗಂತ್ ಅಭಿನಯದ ತ್ರಿಕೋನ ಪ್ರೇಮಕಥೆಯಾದ ಸ್ವಯಂವರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.
ಈ ಬಗ್ಗೆ ಖುಷಿಯಿಂದ ಮಾತನಾಡಿದ ನಿರ್ಮಾಪಕ ಎಂ.ಚಂದ್ರು, ಈಗಾಗಲೇ ಚಿತ್ರದ ಹಾಡುಗಳ ಬಗ್ಗೆ ಪ್ರೇಕ್ಷರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದಿದ್ದಾರೆ. ಈ ಚಿತ್ರವನ್ನು ಮಸ್ತ್ ಮಜಾ ಮಾಡಿ ಚಿತ್ರದ ನಿರ್ದೇಶಕರಾದ ಅನಂತರಾಜು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಚಿತ್ರಕಥೆಯೂ ಅವರದ್ದೇ.
ಕರುನಾಡ ಪ್ರೇಕ್ಷಣೀಯ ಸ್ಥಳಗಳನ್ನು ಹಾಗೂ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣಗೊಳಿಸಿರುವ ಚಿತ್ರತಂಡಕ್ಕೆ ಚಿತ್ರದ ಯಶಸ್ಸಿನ ಬಗ್ಗೆ ಭರವಸೆ ಇದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಬೆನ್ನು ತಟ್ಟಿ ಪ್ರೋತ್ಸಾಹಿಸಿರುವ ಬಗ್ಗೆ ಸಂತಸವಿದೆ. ಇನ್ನು ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಸ್ವಯಂವರ ಪ್ರದರ್ಶನ ನಡೆಯಲಿದೆ!