ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಪ್ತರಕ್ಷಕದ ತೆಲುಗು ರಿಮೇಕ್‌ಗೆ ಚಿರು ಅಲ್ಲ, ವೆಂಕಟೇಶ್! (Aaptha Rakshaka | Telugu | Venkatesh | Aaptha Rakshaka | Chiranjeevi | Rajanikanth)
ಸುದ್ದಿ/ಗಾಸಿಪ್
Bookmark and Share Feedback Print
 
Venkatesh
WD
ಕನ್ನಡದ ಯಶಸ್ವೀ ಚಿತ್ರ ಆಪ್ತರಕ್ಷಕ ಚಿತ್ರ ತೆಲುಗು ಹಾಗೂ ತಮಿಳಿಗೆ ರಿಮೇಕ್ ಆಗುವುದು ಪಕ್ಕಾಗಿದ್ದಂತೂ ನಿಜ. ಆದರೆ ಕನ್ನಡದಲ್ಲಿ ಮಿಂಚಿದ್ದ ವಿಷ್ಣುವರ್ಧನ್ ಪಾತ್ರ ನಿರ್ವಹಿಸುವವರಾರು ಎಂಬ ಪ್ರಶ್ನೆಗೆ ಮಾತ್ರ ಈವರೆಗೆ ಪಕ್ಕಾ ಉತ್ತರ ಲಭ್ಯವಾಗಿರಲಿಲ್ಲ. ತಮಿಳಿನಲ್ಲಿ ರಜನಿ, ತೆಲುಗಿನಲ್ಲಿ ಚಿರಂಜೀವಿ ನಟಿಸುವುದೆಂದು ಸುದ್ದಿಯಾದರೂ, ಆ ಬಗ್ಗೆ ಅಧಿಕೃತ ಮಾಹಿತಿಗಳಿರಲಿಲ್ಲ. ಆದರೀಗ ತೆಲುಗಿನ ಆಪ್ತರಕ್ಷಕ ರಿಮೇಕಿನಲ್ಲಿ ವೆಂಕಟೇಶ್ ನಟಿಸುವುದು ಪಕ್ಕಾ ಆಗಿದೆ.

ತೆಲುಗು ಆಪ್ತರಕ್ಷಕದಲ್ಲಿ ನಟಿಸಲು ಮೆಗಾ ಸ್ಟಾರ್ ಚಿರಂಜೀವಿ ಕೊಂಚ ಆಸಕ್ತಿ ತೋರಿಸಿದರಾದರೂ, ಆವರು ಈ ಚಿತ್ರಕ್ಕಾಗಿ ತಮ್ಮ ತೂಕವನ್ನು ಸಕಷ್ಟು ಇಳಿಸಬೇಕಾಗಿತ್ತು. ಅಷ್ಟೇ ಅಲ್ಲದೆ, ಅವರಿಗೆ ಲಭ್ಯವಿದ್ದ ಸಮಯಕ್ಕೂ ಶೂಟಿಂಗ್ ನಡೆಸಬೇಕೆಂದು ಅಂದುಕೊಂಡಿದ್ದ ಸಮಯಕ್ಕೂ ತಾಳೆಯಾಗುತ್ತಿರಲಿಲ್ಲ. ಇದೇ ಸಂದರ್ಭ ಬೆಳ್ಳಂಕೊಂಡ ಸುರೇಶ್ ಅವರು ಈಗಾಗಲೇ ಈ ಚಿತ್ರವನ್ನು ರಿಮೇಕಿಸಲು ನಿರ್ದೇಶಕ ಪಿ.ವಾಸು ಅವರಿಗೆ ಭಾರೀ ಮುಂಗಡ ಹಣವನ್ನು ಕೊಟ್ಟಿದ್ದಾಗಿಯೂ ಸುದ್ದಿಯಿದ್ದು, ಈಗಾಗಲೇ ರಿಮೇಕ್ ಹಕ್ಕನ್ನೂ ಪಡೆದಿದ್ದಾರೆ.

ಚಂದ್ರಮುಖಿ -2 ಹೆಸರಿನಡಿ ತೆಲುಗು ಹಾಗೂ ತಮಿಳು ಚಿತ್ರ ಹೊರಬರಲಿದೆ. ಇದರ ನಿರ್ದೇಶನ ಜವಾಬ್ದಾರಿಯನ್ನೂ ಪಿ.ವಾಸು ಅವರೇ ಹೊತ್ತಿದ್ದಾರೆ. ಈ ಹಿಂದೆ ಆಪ್ತಮಿತ್ರ ನಿರ್ದೇಶಿಸಿದ ನಂತರ ಪಿ.ವಾಸು, ಅದನ್ನು ತಮಿಳಿನಲ್ಲಿ ಚಂದ್ರಮುಖಿ ಹೆಸರಿನಲ್ಲಿ ರಿಮೇಕ್ ಮಾಡಿ ಭಾರೀ ಯಶಸ್ಸು ಗಳಿಸಿದ್ದರು. ಅದನ್ನು ತೆಲುಗಿಗೂ ಡಬ್ ಮಾಡಿದ್ದರು. ಆದರೆ ತೆಲುಗಿನಲ್ಲಿ ಇದು ಯಶಸ್ವಿಯಾಗಿರಲಿಲ್ಲ. ಈಗ ಚಂದ್ರಮುಖಿ -2 ಹೆಸರಿನಡಿ ಬರುತ್ತಿರುವ ಆಪ್ತರಕ್ಷಕ ಚಿತ್ರಕ್ಕೆ ತಮಿಳಿನಲ್ಲಿ ರಜನಿ ಹಾಗೂ ತೆಲುಗಿಗೆ ವೆಂಕಟೇಶ್ ಅವರನ್ನು ಹಾಕಿಕೊಂಡು ರಿಮೇಕಿಸುವುದು ಬಹುತೇಕ ಪಕ್ಕಾ ಆಗಿದೆ ಎಂದು ಮೂಲಗಳು ತಿಳಿಸಿವೆ.

ವೆಂಕಟೇಶ್ ಅವರು ಈಗಾಗಲೇ ಈ ಪಾತ್ರ ಮಾಡಲು ಒಪ್ಪಿದ್ದು, ವಾಸು ಅವರು ಸದ್ಯದಲ್ಲೇ ತೆಲುಗು ಚಂದ್ರಮುಖಿಯನ್ನು ಕೈಗೆತ್ತಿಕೊಳ್ಳಲಿದ್ದಾರೆ. ನಿರ್ಮಾಪಕರಾಗಿ ಬೆಳ್ಳಂಕೊಂಡ ಸುರೇಶ್ ಕಾರ್ಯನಿರ್ವಹಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಪ್ತರಕ್ಷಕ, ತೆಲುಗು ಸಿನಿಮಾ, ವಿಷ್ಣುವರ್ಧನ್, ಪಿವಾಸು, ಚಂದ್ರಮುಖಿ, ರಜನೀಕಾಂತ್, ಚಿರಂಜೀವಿ