ಮಕ್ಕಳು ಚಿಕ್ಕವಯಸ್ಸಿನಲ್ಲಿ ಸರಿಯಾಗಿ ವಿದ್ಯೆ ಕಲಿಯದಿದ್ದರೆ ಅವರ ಮುಂದಿನ ಬದುಕಿನಲ್ಲಿ ಎದುರಿಸಬೇಕಾದ ಅವಮಾನಗಳನ್ನು ಬಿಂಬಿಸುವಂತಹ ಎಜುಕೇಷನ್ 2020 ಎಂಬ ಕಿರುಚಿತ್ರವನ್ನು ನಿರ್ದೇಶಕ ಬಿ.ಸೆಲ್ವಂ ಮಾಡುತ್ತಿದ್ದಾರೆ.
ಮಾಣಿಕ್ ಗ್ರೂಪ್ ಪ್ರೊಡೆಕ್ಷನ್ ಲಾಂಛನದಲ್ಲಿ ಡಿ.ಒ.ಸುರೇಶ್ ನಿರ್ಮಿಸಿರುವ ಈ ಚಿತ್ರ 45 ನಿಮಿಷಗಳ ಕಾಲ ಕಿರುಚಿತ್ರವನ್ನು ರೇಣುಕಾಂಬ ಥಿಯೇಟರನಲ್ಲಿ ಪೂರ್ವಭಾವಿ ಪ್ರದರ್ಶನವನ್ನು ಏರ್ಪಡಿಸಿದ್ದರು. ವಿದ್ಯಾವಂತ ಮತ್ತು ಅವಿದ್ಯಾವಂತ ವ್ಯಕ್ತಿಯ ಜೀವನದ ನಡುವಿನ ಅಂತಃರವನ್ನು ಬಿಂಬಿಸುವುದೇ ಚಿತ್ರದ ಕಥೆ. ಇದನ್ನು ರಾಜ್ಯದ ಪ್ರತಿಯೊಂದು ಜಿಲ್ಲೆ, ನಗರ, ಹಾಗೂ ಶಾಲೆಗಳಲ್ಲಿ, ಪ್ರದರ್ಶನ ಮಾಡಿಸುತ್ತ ವಿದ್ಯೆಯ ಮಹತ್ವವನ್ನು ಹೇಳುವುದಾಗಿದೆ.
ನಿರ್ದೇಶಕರ ಪ್ರಕಾರ ಕಿರುಚಿತ್ರದಲ್ಲಿ ಮೂರು ಹಂತಗಳಲ್ಲಿ ಮನುಷ್ಯನ ಜೀವನ ಶೈಲಿಯನ್ನು ಬಿಂಬಿಸಿದ್ದು 1979, 2010, 2020 ಹೀಗೆ ಮೂರು ಕಾಲಮಾನಗಳ ಶಿಕ್ಷಣ ವ್ಯವಸ್ಥೆಯ ಬಗ್ಗೆ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಸಮಾಜದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿಸುವ ಬಗ್ಗೆ ಧ್ವನಿ ಎತ್ತಿರುವ ಇವರು, ಮುಂದಿನ ದಿನಗಳಲ್ಲಿ ವಿದ್ಯೆ ಇಲ್ಲದಿದ್ದರೆ ಕಸ ಗುಡಿಸುವ ಕೆಲಸವೂ ಸಿಗುವುದಿಲ್ಲ ಎಂಬ ಕಟುಸತ್ಯವನ್ನು ಚಿತ್ರದಲ್ಲಿ ತೊರಿಸಿದ್ದಾರೆ.
ಚಿತ್ರಕ್ಕೆ ಮುತ್ತುರಾಜ್ ಅವರ ಛಾಯಾಗ್ರಹಣ, ವಿಜಯಾರತಿಯವರ ಸಂಗೀತವಿದ್ದು, ಸಂಕಲನ ಹರಿವಿಜಯ ಹಾಗೂ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.