ಕನ್ನಡದ ದನಿಯಾಗಿ ಇದೇ ಮೊದಲ ಬಾರಿಗೆ 'ಪ್ರಾರ್ಥನೆ' ಎಂಬ ಕನ್ನಡ ಚಿತ್ರವೊಂದರಲ್ಲಿ ಲೇಖಕಿ, ಇನ್ಪೋಸಿಸ್ ಒಡೆಯ ನಾರಾಯಣ ಮೂರ್ತಿರವರ ಮಡದಿ ಸುಧಾಮೂರ್ತಿ ಬಣ್ಣ ಹಚ್ಚಲಿದ್ದಾರೆ.
ಪಾತ್ರದ ಬಗ್ಗೆ ಕೇಳಿ ಸಂತೋಷವಾಯಿತ್ತು. ಆದಕ್ಕೆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಚಿತ್ರದ ಕಥಾವಸ್ತು ಬಹಳ ಚೆನ್ನಾಗಿದೆ. ಚಿತ್ರವು ನಾಡಿನ ಸಾಂಸ್ಕ್ಕತಿಕ ಅಂಶವನ್ನು ಒಳಗೊಂಡಿದ್ದು, ಅದನ್ನು ಮಾಡುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾರೆ ಸುಧಾಮೂರ್ತಿ.
ಪತ್ರಕರ್ತ ಸದಾಶಿವ ಶೆಣೈ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅನಂತ್ ನಾಗ್, ಪ್ರಕಾಶ್ ರೈ ಮತ್ತು ಪವಿತ್ರ ಲೋಕೇಶ್ ಅಭಿನಯಿಸುತ್ತಿದ್ದಾರೆ. ಕನ್ನಡ ಭಾಷೆಯ ಪ್ರತೀಕವಾಗಿ ಡಾ.ರಾಜ್ ಕುಮಾರ್ ನನಗೆ ನೆನೆಪಾಗುತ್ತಾರೆ ಎಂದು ಹಂಚಿಕೊಳ್ಳುತ್ತಾರೆ ಸುಧಾ. ಲೇಖಕಿಯಾಗಿ ರಾಷ್ಟ್ತ್ರಮಟ್ಟದಲ್ಲಿ ಹಾಗೂ ವಿಶ್ವಮಟ್ಟದಲ್ಲಿ ಗಮನ ಸೆಳೆದಿರುವ ಇವರು, ಈ ಪಾತ್ರಕ್ಕೆ ಸ್ವಾಭಾವಿಕವಾಗಿರುತ್ತದೆ ಎನ್ನುವುದು ಚಿತ್ರ ತಂಡದ ಅಭಿಪ್ರಾಯ.