ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣುವರ್ಧನ್ ಎಂಬ 'ಆಪ್ತರಕ್ಷಕ'ನ 200 ದಿನಗಳ ಕನಸು! (Vishnuvardhan | P.Vasu | Aptharakshaka | Chandramukhi)
ಸುದ್ದಿ/ಗಾಸಿಪ್
Bookmark and Share Feedback Print
 
NRB
ಕನ್ನಡದ ಕಣ್ಮಣಿ, ಪ್ರತಿಭಾವಂತ ನಟ ದಿ.ವಿಷ್ಣುವರ್ಧನ್ ಅವರಿಗೆ ತಮ್ಮ ಆಪ್ತರಕ್ಷಕ ಚಿತ್ರ 200ನೇ ದಿನ ಆಚರಿಸಬೇಕೆಂಬ ಬಯಕೆಯಿತ್ತಂತೆ. ಅಷ್ಟೇ ಅಲ್ಲ, 200ನೇ ದಿನ ಸಂಭ್ರಮವನ್ನು ಇಡೀ ಚಿತ್ರತಂಡ ಒಂದು ಹಬ್ಬದಂತೆ ಆಚರಿಸಿ ಸಂಭ್ರಮಿಸಬೇಕೆಂಬ ಬಯಕೆಯೂ ಇತ್ತಂತೆ. ಹಾಗಂತ ಆಪ್ತರಕ್ಷಕ ಚಿತ್ರದ ನಿರ್ದೇಶಕ ಪಿ. ವಾಸು ಅವರೇ ಮನಬಿಚ್ಚಿ ಹೇಳಿದ್ದಾರೆ.

ವಿಷ್ಣು ಅವರ ಅಭಿನಯ, ಅವರು ಚಿತ್ರಕ್ಕೆ ಸಹಕರಿಸಿದ ಬಗೆಯನ್ನು ಎಷ್ಟು ಹೇಳಿದರೂ ಸಾಲದು. ಅದನ್ನು ಪದಗಳಲ್ಲಿ ಬಿಂಬಿಸಲು ಸಾದ್ಯವಾಗದು. ಆಪ್ತರಕ್ಷಕ ಚಿತ್ರ 200 ದಿನಗಳನ್ನು ಪೂರೈಸಿ, ಆ ಸಮಾರಂಭವನ್ನು ವಿಶಿಷ್ಟ ಹಬ್ಬದಂತೆ ಆಚರಿಸಬೇಕು ಎನ್ನುವುದು ವಿಷ್ಣು ಅವರ ಬಯಕೆಯಾಗಿತ್ತು ಎಂದರು ವಾಸು.

ವಿಷ್ಣು ಅವರ ಆಸೆಯಂತೆ ಚಿತ್ರವು 200 ದಿನಗಳ ಪ್ರದರ್ಶನ ಕಂಡರೆ ಖಂಡಿತ ಅದನ್ನು ಹಬ್ಬದಂತೆ ಆಚರಿಸುವುದಾಗಿ ಹೇಳಿದ ಅವರು, ಆಪ್ತರಕ್ಷಕ ಚಿತ್ರದ ಕಥೆಯನ್ನು ಆಪ್ತಮಿತ್ರದ ಭಾಗ 2 ಎಂದು ಮಾಡಲಿಲ್ಲ. ಬದಲಿಗೆ ಚಂದ್ರಮುಖಿ ಭಾಗ 2 ಎಂದು ಕಥೆಯನ್ನು ಮೊದಲು ಸಿದ್ದಪಡಿಸಿದರಂತೆ. ಆದರೆ ತಮಿಳಿನಲ್ಲಿ ಚಂದ್ರಮುಖಿ -2 ಮಾಡುವ ಮೊದಲು ಕನ್ನಡದಲ್ಲಿ ಮಾಡೋಣ ಎಂದು ಆಪ್ತರಕ್ಷಕನನ್ನು ನಿರ್ದೇಶಿಸಿದೆ ಎನ್ನುತ್ತಾರೆ ವಾಸು.

ಕನ್ನಡದ ಆಪ್ತಮಿತ್ರ ಚಿತ್ರ ಯಶಸ್ಸು ನನ್ನ ಕೀರ್ತಿಯನ್ನು ಹೆಚ್ಚಿಸಿದೆ. ನಾನು ಈಗಾಗಲೇ ತಮಿಳು, ಹಿಂದಿ, ತೆಲುಗು, ಭಾಷೆಗಳಲ್ಲಿ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಆದರೆ ಇಷ್ಟು ಯಶಸ್ಸು ಕೊಟ್ಟ ಚಿತ್ರವನ್ನು ಮರೆಯಲು ಸಾಧ್ಯವಿಲ್ಲ ಎಂದರು ವಾಸು. ಚಿತ್ರ 200 ದಿನಗಳ ಸಂಭ್ರಮ ಆಚರಿಸಲಿ ಎಂದು ಹಾರೈಸೋಣ.

(ಆಪ್ತರಕ್ಷಕ ಚಿತ್ರದ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಪಿವಾಸು, ಆಪ್ತರಕ್ಷಕ, ಚಂದ್ರಮುಖಿ