ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಳೆ ಹಾಡಿಗೆ ಹೊಸ ಟ್ಯೂನ್ ಕೆಂ(ಕಂ)ಪಾದವು..! (Kempadavo | Eddelu Manjunatha | Anup Seelin)
ಸುದ್ದಿ/ಗಾಸಿಪ್
Bookmark and Share Feedback Print
 
ಹಳೆ ಬೇರು ಹೊಸ ಚಿಗುರು ಎಂಬಂತೆ ಕನ್ನಡದ ಜನಪ್ರಿಯ ಹಳೆಯ ಹಾಡುಗಳನ್ನು ಹೊಸ ಚಿತ್ರಗಳಲ್ಲಿ ಬಳಸಿಕೊಳುತ್ತಿರುವುದು ಈಗ ಸಾಮಾನ್ಯ. ಕಿಟ್ಟು ಪುಟ್ಟು ಚಿತ್ರದ ಜನಪ್ರಿಯ ಹಾಡು 'ಸುತ್ತ ಮುತ್ತ ಯಾರು ಇಲ್ಲ...' ಎಂಬ ಹಾಡನ್ನು ಇಂದ್ರಜಿತ್ ಲಂಕೇಶ್ ಅವರ ತುಂಟಾಟ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಕೆಲವು ಚಿತ್ರಗಳಲ್ಲಿ ಡಾ.ರಾಜ್ ಚಿತ್ರದ ಹಲವು ಹಾಡುಗಳನ್ನು ಬಳಸಲಾಗಿದೆ.

ಇದೀಗ ಎಲ್ಲಿಂದಲೋ ಬಂದವರು ಚಿತ್ರದ ಪಿ.ಲಂಕೇಶ್ ಅವರ ಕೆಂಪಾದವೋ ಎಲ್ಲಾ ಕೆಂಪಾದವೋ ಎಂಬ ಹಾಡನ್ನು ಪ್ರೇಮಿಗಾಗಿ ಚಿತ್ರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಪಕೃತಿಯ ವರ್ಣನೆಗೆ ಬಳಸಲಾಗಿದ್ದು, ಇಲ್ಲಿ ಪ್ರೀತಿಯ ವರ್ಣನೆಯನ್ನು ಸಂಗೀತ ನಿರ್ದೇಶಕ ಅನುಪ್ ಸೀಳಿನ್ ಅವರು ಪ್ರೇಮಿಗಾಗಿ ಚಿತ್ರಕ್ಕೆ ಮಾಡಿದ್ದಾರೆ. ಇಲ್ಲಿ ಸಾಹಿತ್ಯವನ್ನಷ್ಟೆ ಬಳಸಿಕೊಳಲಾಗಿದ್ದು, ಹೊಸ ಟ್ಯೂನ್ ನೀಡಲಾಗಿದೆ. ಅಲ್ಲದೆ, ಈ ಗೀತೆಯನ್ನು ಸ್ವತಃ ಸೀಳಿನ್ ಅವರೇ ಈ ಹಾಡಿರುವುದು ವಿಶೇಷ.

ಈ ಹಿಂದೆ ಸೀಳಿನ್ ಅವರು ಎದ್ದೇಳು ಮಂಜುನಾಥಾ ಚಿತ್ರದ ಕುವೆಂಪು ಅವರ ಬಾ ಚಕೋರಿ ಚಂದ್ರಮಂಚಕೆ ಹಾಡನ್ನು ಬಳಸಿದ್ದರು. ಅಂತೆಯೇ ಯಕ್ಷ ಚಿತ್ರಕ್ಕೂ ಇಂತಹ ಪ್ರಯೋಗವನ್ನು ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೆಂಪಾದವೋ, ಎದ್ದೇಳು ಮಂಜುನಾಥ, ಅನೂಪ್ ಸೀಳಿನ್