ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನಸುಗಾರ ಕರಣ್‌ರ ಸ್ಯಾಂಡಲ್‌ವುಡ್ 'ಪಾನಿಪುರಿ'! (Kanasugara | Karan | Panipuri)
ಸುದ್ದಿ/ಗಾಸಿಪ್
Bookmark and Share Feedback Print
 
ಕನಸುಗಾರ, ಸೊಗಸುಗಾರ ಚಿತ್ರಗಳ ನಿರ್ದೇಶನ ಮಾಡಿರುವ ಕರಣ್ ಈಗ ಪಾನಿಪುರಿ ಮಾಡುತ್ತಿದ್ದಾರೆ. ಆಶ್ಚರ್ಯಪಡಬೇಡಿ. ಇದು ಅವರ ನಿರ್ದೇಶನದ ಚಿತ್ರದ ಹೆಸರು. ಮುಂದಿನ ತಿಂಗಳು 20 ರಂದು ಈ ಚಿತ್ರ ಸೆಟ್ಟೆರಲಿದೆ.

60 ದಿನಗಳ ಕಾಲ ನಡೆಯಲಿರುವ ಚಿತ್ರೀಕರಣದಲ್ಲಿ ಬೆಂಗಳೂರು, ದಕ್ಷಿಣ ಕನ್ನಡ ಹೈದಾರಾಬಾದಿನ ಬೀದಿಗಳಲ್ಲಿ ಭಾಸ್ಕರ್ ಛಾಯಗ್ರಾಹಣದಲ್ಲಿ ದೃಶ್ಯಗಳನ್ನು ಸೇರೆ ಹಿಡಿಯಲಿದ್ದಾರೆ. ಚಿತ್ರಕ್ಕೆ ಮತ್ತಷ್ಟು ಮೆರುಗು ಕೊಡುವ ಸಲುವಾಗಿ ಹಾಡುಗಳನ್ನು ವಿದೇಶಗಳಲ್ಲಿ ಚಿತ್ರಿಕರಿಸಲಾಗುವುದಂತೆ.

ದೂಧ್ ಪೇಡ ಖ್ಯಾತಿಯ ದಿಗಂತ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಮನಸಾರೆ ಚಿತ್ರದ ಯಶಸ್ವಿನ ಗುಂಗಿನಲ್ಲಿದ್ದಾರೆ ದಿಗಂತ್. ಚಿತ್ರಕ್ಕೆ ಇವರ ಸಂಗಾತಿ ಯಾರೆಂಬುದು ಮಾತ್ರ ಇನ್ನು ನಿಗದಿಯಾಗಿಲ್ಲ. ಸದ್ಯದಲ್ಲೆ ನಾಯಕಿಯನ್ನು ಅಂತಿಮಗೊಳಿಸಲಾಗುವುದು ಎನ್ನುತ್ತಾರೆ ಕರಣ್. ಅಂದಹಾಗೆ ಚಿತ್ರಕ್ಕೆ ಕರಣ್ ಅವರೇ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನಸುಗಾರ, ಕರಣ್, ಪಾನಿಪುರಿ