ನಟ ಮೋಹನ್ ತಮ್ಮ ಚಿತ್ರದ ಪ್ರಚಾರವನ್ನು ವಿಭಿನ್ನ ರೀತಿಯಲ್ಲಿ ಮಾಡಬೇಕೆಂದು ಹೊರಟಿದ್ದಾರೆ. ಚಿತ್ರದ ಚಿತ್ರೀಕರಣವು ಪೂರ್ಣಗೊಂಡಿದ್ದು, ತೆರೆಗೆ ಸಿದ್ದವಾಗಿರುವ ಕೃಷ್ಣ ನೀ ಲೇಟಾಗ್ ಬಾರೋ ಚಿತ್ರದ ಪ್ರಚಾರಕ್ಕೆ ವಿನೂತನ ಶೈಲಿಯ ಪ್ರಚಾರವನ್ನು ಕೈಗೊಂಡಿದ್ದಾರೆ.
ಬಿಡುಗಡೆಗೂ ಮುನ್ನವೇ ಸುಮಾರು 80 ಬುಲೆಟ್ ಬೈಕ್ಗಳ ಮೂಲಕ ಬೆಂಗಳೂರಿನಿಂದ ಮೈಸೂರಿನವರೆಗೆ ಮೆರವಣಿಗೆ ಹೊರಡುವ ಪ್ಲಾನ್ ಅವರದು. ಆದರೆ ಚಿತ್ರ ಬಿಡುಗಡೆಯ ದಿನಾಂಕ ಇನ್ನು ನಿಗದಿಯಾಗದ ಕಾರಣ ಬೈಕ್ ರ್ಯಾಲಿಯ ದಿನಾಂಕವನ್ನು ಗೊತ್ತು ಪಡಿಸಿಲ್ಲ. ಚಿತ್ರದ ಬಿಡುಗಡೆಗೆ ಚುನಾವಣೆ ಎದುರಾಗುವ ಭೀತಿಯು ಮೋಹನ್ ಅವರನ್ನು ಕಾಡುತ್ತಿದೆ.
ಈ ಬುಲೆಟ್ ರ್ಯಾಲಿಯ ಐಡಿಯಾ ಮೊದಲು ಬಂದದ್ದು ಬುಲೆಟ್ ಖ್ಯಾತಿಯ ಪ್ರಕಾಶ್ಗೆ ಎನ್ನುವುದು ಗಾಂಧಿನಗರದ ಸುದ್ದಿ. ಏನೇ ಆದರೂ ಇಂತಹ ಹೊಸ ಪ್ರಯತ್ನಗಳು ಎಷ್ಟರಮಟ್ಟಿಗೆ ಜನರನ್ನು ತಲುಪುತ್ತದೋ ಗೊತ್ತಿಲ್ಲ, ಆದರೂ, ಚಿತ್ರ ಚೆನ್ನಾಗಿದ್ದರೆ ಜನ ಖಂಡಿತಾ ತಿಯೇಟರಿಗೆ ಬರುತ್ತಾರೆ ಎಂಬುದಂತೂ ಸತ್ಯ.