2008ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಪ್ರಶಸ್ತಿಗಳನ್ನು ಬಾಚಿಕೊಂಡ ಮೊಗ್ಗಿನ ಮನಸು ಚಿತ್ರ ಇದೀಗ ತೆಲುಗಿಗೆ ರಿಮೇಕ್ ಆಗಿ ಮೂಡಿಬರಲಿದೆ. ಮೊಗಲಾಂಟೆ ಮನಸು ಎಂಬ ಶೀರ್ಷಿಕೆಯಲ್ಲಿ ಬರುತ್ತಿರುವ ಈ ಚಿತ್ರದ ಮುಹೂರ್ತ ಇದೇ 25 ರಂದು ಹೈದರಾಬಾದಿನಲ್ಲಿ ನಡೆಯಲಿದೆ. ಉದ್ಯಮಿ ಶಂಕರ್ ಅವರು ನಿರ್ಮಿಸುತ್ತಿರುವ ಈ ಚಿತ್ರವು ನಿರ್ದೇಶಕ ವೆಂಕಟ್ ಅವರ ಮೊದಲ ಚಿತ್ರವಾಗಿದೆ.
ಇತ್ತೀಚೆಗೆ ಕನ್ನಡದ ಹಲವು ಚಿತ್ರಗಳು ತೆಲುಗು, ತಮಿಳು, ಭಾಷೆಗೆ ರಿಮೇಕ್ ಆಗುತ್ತಿರುವುದು ಸಂತಂಸದ ಸುದ್ದಿಯೇ ಸರಿ. ಮುಂಗಾರು ಮಳೆ, ದುನಿಯಾ ನಂತರ ಇದೀಗ ಮೊಗ್ಗಿನ ಮನಸು ಚಿತ್ರ ರಿಮೇಕ್ ಆಗುತ್ತಿರುವುದು ವಿಶೇಷ.
ಶುಭಾ ಪೂಂಜಾ, ಮಾಡಿದ ಪಾತ್ರವನ್ನು ಕನ್ನಡದವರೇ ಆದ ಕೀರ್ತಿ ಅಭಿನಯಿಸುತ್ತಿದ್ದಾರೆ. ಇವರು ಇತ್ತಿಚೆಗೆ ತೆರೆ ಕಂಡ ಪ್ರೀತಿ ನೀ ಶಾಶ್ವತಾನಾ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮೂಲಗಳ ಪ್ರಕಾರ, ಮೂರು ಹಾಡುಗಳನ್ನು ಹಾಗೇಯೆ ಬಳಸಲಾಗುವುದು. ತೆಲುಗಿನಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಕನ್ನಡದಂತೆ ತೆಲುಗು ಪ್ರೇಕ್ಷಕರನ್ನೂ ಮೋಡಿ ಮಾಡಲಿದೆಯೇ ಕಾದು ನೋಡಬೇಕಿದೆ.