ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಯಲ್ ಚಾಲೆಂಜರ್ಸ್‌ನಲ್ಲಿ ಮತ್ತೆ ಒಂದಾದ ರಮ್ಯಾ, ಪುನೀತ್! (Bangalore Royal Challengers | Ramya | Puneeth)
ಸುದ್ದಿ/ಗಾಸಿಪ್
Bookmark and Share Feedback Print
 
WD
ರಮ್ಯಾ ಈಗ ಸಿಕ್ಕಾಪಟ್ಟೆ ಜೋಶ್‌ನಲ್ಲಿದ್ದಾರೆ. ಫೇಸ್‌ಬುಕ್, ಟ್ವಿಟರ್, ಬ್ಲಾಗ್ ಹೀಗೆ ಎಲ್ಲೆಲ್ಲೂ ರಮ್ಯ ರಮ್ಯಾ ರಮ್ಯಾ... ಅಷ್ಟೇ. ಕಾರಣ ಬೆಂಗಳೂರು ರಾಯಲ್ ಚಾಲೆಂಜರ್ಸ್!

ರಾಯಲ್ ಚಾಲೆಂಜರ್ಸ್‌ಗೂ ರಮ್ಯಾಗೂ ಏನು ಸಂಬಂಧ ಎನ್ನಬೇಡಿ. ರಮ್ಯಾ ರಾಯಲ್ ಚಾಲೆಂಜರ್ಸ್ ತಂಡದ ರಾಯಭಾರಿ. ನಮ್ಮ ಪವರ್ ಸ್ಟಾರ್ ಪುನೀತ್ ಕೂಡಾ! ಇವರಿಬ್ಬರೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಟೀ ಶರ್ಟ್ ತೊಟ್ಟು ವಿವಿಧ ಭಂಗಿಗಳಲ್ಲಿ ಫೋಟೋಗೆ ಪೋಸ್ ಕೊಟ್ರು. ಬೆಂಗಳೂರು ತಂಡವೇ ವಿಜಯಿಯಾಗಲಿ ಎಂಬುದೇ ರಮ್ಯಾಳ ಹರಕೆ, ಹಾರೈಕೆ.

ನನಗೆ ಕ್ರಿಕೆಟ್ ಅಂದರೆ ಅಷ್ಟೇನೂ ಮೊದಲು ಆಸಕ್ತಿಯಿರಲಿಲ್ಲ. ಆದರೆ ಭಾರತ- ಪಾಕ್ ಆಟ ಅಂದೊಮ್ಮೆ ಬೆಂಗಳೂರಲ್ಲಿ ನಡೆದಾಗ ನಾನೂ ಹೋಗಿದ್ದೆ. ಆಗ ನಮ್ಮ ಭಾರತ ವಿಜಯಿಯಾಗಿತ್ತು. ಅಂದಿನಿಂದ ನನಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಬಂತು. ಇದೀಗ ಐಪಿಎಲ್‌ನಲ್ಲಿಯೂ ಈ ಹಿಂದೆ ಭಾಗವಹಿಸಿ ಇನ್ನೂ ಹೆಚ್ಚಿನ ಆಸಕ್ತಿ ಬೆಳೆದಿದೆ. ಈ ಬಾರಿ ನಾನು ಹಾಗೂ ಅಪ್ಪು ಇಬ್ಬರೂ ರಾಯಲ್ ಚಾಲೆಂಜರ್ಸ್ ಪರವಾಗಿ ಅಭಿಮಾನಿಗಳ ಜೊತೆ ಕೂತು ಮ್ಯಾಚ್‌ನಲ್ಲಿ ಗೆಲ್ಲಲು ತಂಡ್ಕಕೆ ಹುರಿದುಂಬಿಸುತ್ತೇನೆ. ಅಪ್ಪು ಹಾಗೂ ನಾನು ಅಭಿ ಚಿತ್ರದಲ್ಲಿ ಜೊತೆಯಾದ ಮೇಲೆ ಮತ್ತೆ ಜೊತೆಯಾಗಲಿಲ್ಲ. ಈಗ ಆ ಅವಕಾಶ ಬಂದಿದೆ. ಅಪ್ಪು ಹಾಗೂ ನನ್ನ ಪೇರ್ ಚೆನ್ನಾಗಿರುತ್ತೆ. ರಾಶಿ ರಾಶಿ ಫ್ಯಾನ್‌ಗಳ ಜೊತೆಯಲ್ಲಿ ಮ್ಯಾಚ್ ನೋಡೋದೇ ಸಂತಸ, ಹುರ್ರೇ ಎಂದು ರಮ್ಯಾ ಭರ್ಜರಿ ಸಂತಸ ವ್ಯಕ್ತಪಡಿಸುತ್ತಾರೆ.
MOKSHA


ನಮ್ಮ ಬೆಂಗಳೂರು ತಂಡ ಉತ್ತಮವಾಗಿ ಆಡಬೇಕು. ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ಬೇಕು. ಹೆಚ್ಚು ಹೆಚ್ಚು ಟಿಕೆಟ್ ಖರೀದಿಸಿ, ಆಟ ನೋಡಿ, ಹುರಿದುಂಬಿಸಿ, ಸೀಟ್ ಸಿಕ್ಕದಿದ್ದರೆ ನಾನು ಎದ್ದು ನಿಂತು ನಿಮಗೆ ಸೀಟ್ ಬಿಟ್ಟುಕೊಡುತ್ತೇನೆ ಎಂದು ಸಿಕ್ಕಾಪಟ್ಟೆ ಜೋಶ್‌ನಲ್ಲಿ ರಮ್ಯಾ ಇದೀಗ ಫೇಸ್‌ಬುಕ್, ಟ್ವಿಟರ್‌ಗಳೆಲ್ಲಾ ತನ್ನ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹತ್ತಿಸುತ್ತಿದ್ದಾರೆ.

ಮಾರ್ಚ್ 16ರಂದು ರಾಯಲ್ ಚಾಲೆಂಜರ್ಸ್ ತಂಡದ ಮೊದಲ ಮ್ಯಾಚ್ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಎಲ್ಲೆಲ್ಲಿ ಆಡುತ್ತೋ ಅಲ್ಲೆಲ್ಲಾ ಪುನೀತ್, ರಮ್ಯಾ ತಂಡಕ್ಕೆ ಒತ್ತಾಸೆಯಾಗಲಿದ್ದಾರೆ. ರಮ್ಯಾ ಅಂತೂ ಇನ್ನೊಂದು ತಿಂಗಳಿಡೀ ರಾಯಲ್ ಚಾಲೆಂಜರ್ಸ್‌ಗಾಗಿ ಬಿಡುವು ಮಾಡಿದ್ದಾರೆ. ಪುನೀತ್ ಕೂಡಾ. ಪುನೀತ್ ಹಾಗೂ ರಮ್ಯಾ ರಾಯಲ್ ಚಾಲೆಂಜರ್ಸ್ ತಂಡಕ್ಕೆ ರಾಯಭಾರಿಗಳಾದರೂ, ಇನ್ನೂ ಕನ್ನಡದ ಹಲವು ತಾರೆಯರು ಕ್ರಿಕೆಟ್‌ಗಾಗಿ ಕ್ರೀಡಾಂಗಣದಲ್ಲಿ ಹುರ್ರೇ ಎಂದು ಹುರಿದುಂಬಿಸಲಿದ್ದಾರೆ. ನಟಿ ಐಂದ್ರಿತಾ ರೇ, ರಾಧಿಕಾ ಪಂಡಿತ್, ರಾಹುಲ್ ದ್ರಾವಿಡ್ ಅವರ ಸ್ನೇಹಿತನೂ ಆಗಿರುವ ಕಿಚ್ಚ ಸುದೀಪ್ ಎಲ್ಲರೂ ಕೆಲವೊಂದು ಮ್ಯಾಚ್‌ಗಳಲ್ಲಿ ತಂಡದ ಪರವಾಗಿ ಕ್ರೀಡಾಂಗಣದ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಪುನೀತ್ ಕೂಡಾ ರಮ್ಯಾರಷ್ಟೇ ಉತ್ಸಾಹದಲ್ಲಿದ್ದಾರೆ. ಅವರಿಗೂ ಕ್ರಿಕೆಟ್ ಮೆಚ್ಚಿನ ಆಟವಾಗಿದ್ದು, ಬೆಂಗಳೂರು ತಂಡ ವಿಜಯಿಯಾಗುವವರೆಗೆ ಉತ್ಸಾಹ ಬತ್ತುವುದಿಲ್ಲ ಎನ್ನುತ್ತಾರೆ. ಪುನೀತ್ ಅಣ್ಣ ಶಿವರಾಜ್ ಕುಮಾರ್ ಕೂಡಾ ತಮ್ಮ ಶೂಟಿಂಗ್ ಸಮಯವನ್ನು ಅಡ್ಜೆಸ್ಟ್ ಮಾಡಿ ಮ್ಯಾಚ್ ನೋಡುವ ತವಕದಲ್ಲಿದ್ದಾರೆ. ತಮ್ಮ ಪುನೀತ್ ರಾಯಲ್ ಚಾಲೆಂಜರ್ಸ್ ತಂಡದ ರಾಯಭಾರಿಯಾಗಿರುವುದಕ್ಕೆ ಶಿವಣ್ಣರಿಗೆ ಅಪರಿಮಿತ ಆನಂದ.

ಕನ್ನಡ ತಾರೆಯರ ದಂಡೇ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಹುರ್ರೇ ಅನ್ನುತ್ತಿದ್ದರೆ, ನೀವ್ಯಾಕೆ ತಡ, ಅವರ ದನಿಯೊಂದಿಗೆ ದನಿಯಾಗುವ ಅವಕಾಶವೂ ನಿಮ್ಮದಾಗಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಹೆಸರು ರಾರಾಜಿಸಲಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೆಂಗಳೂರು ರಾಯಲ್ ಚಾಲೆಂಜರ್ಸ್, ರಮ್ಯಾ, ಪುನೀತ್, ಕನ್ನಡ ಸಿನಿಮಾ, ಸುದೀಪ್, ಐಂದ್ರಿತಾ, ರಾಧಿಕಾ, ಕ್ರಿಕೆಟ್